ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಬೆಳ್ಳಿರಥ ಯಾತ್ರೆ

0

ಶ್ರೀರಾಮಪೇಟೆಯಲ್ಲಿ ಶ್ರೀಮತಿ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ.ಯವರಿಂದ ಭವ್ಯ ಸ್ವಾಗತ

ಡಾ.ಕೆ.ವಿ.ರೇಣುಕಾಪ್ರಸಾದರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ಸುಳ್ಯ ಶ್ರೀರಾಮ ಪೇಟೆ ತಲುಪುತ್ತಿದ್ದಂತೆ ಅಪೂರ್ವ ಕ್ಷಣ ಎದುರಾಯಿತು.


ರಾತ್ರಿ ಸುಮಾರು 10.30 ಕ್ಕೆ
ಶ್ರೀರಾಮಪೇಟೆಗೆ ಬೆಳ್ಳಿರಥ ಯಾತ್ರೆ ಅಗಮಿಸುತ್ತಿದ್ದಂತೆ ಡಾ.ಕೆ.ವಿ.ಚಿದಾನಂದರ ನೇತೃತ್ವದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ತಂಡ ಡಾ.ಕೆ.ವಿ.ಚಿದಾನಂದರ ಮನೆಯ ಎದುರುಗಡೆ ಕಾದು ನಿಂತಿತ್ತು. ಡಾ.ಚಿದಾನಂದರ ಪತ್ನಿ ಶ್ರೀಮತಿ ಶೋಭಾ ಚಿದಾನಂದ, ಪುತ್ರ ಅಕ್ಷಯ್ ಕೆ.ಸಿ., ಆಯುರ್ವೇದ ಕಾಲೇಜ್ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ. ಮತ್ತು ಹಲವು ಮಂದಿ ಅಕಾಡೆಮಿ ಉದ್ಯೋಗಿಗಳು ಈ ತಂಡದಲ್ಲಿದ್ದರು. ರಾತ್ರಿ 9.30 ರ ವರೆಗೆ ಡಾ.ಕೆ.ವಿ.ಚಿದಾನಂದರೂ ಬೆಳ್ಳಿರಥದ ಸ್ವಾಗತಕ್ಕಾಗಿ ಕಾದಿದ್ದರೆನ್ನಲಾಗಿದೆ.

ತಡವಾದುದರಿಂದ ಅವರ ಆರೋಗ್ಯದ ಕಾರಣದಿಂದ ಅವರು ಮನೆಗೆ ತೆರಳಿದರೆಂದು ತಿಳಿದುಬಂದಿದೆ. ಬೆಳ್ಳಿರಥ ಅಲ್ಲಿಗೆ ಬರುತ್ತಿದ್ದಂತೆ ಶೋಭಾ ಮೇಡಂ, ಅಕ್ಷಯ್, ಲೀಲಾಧರ್ ಅವರೆಲ್ಲ ಮುಂದೆ ಬಂದು ರಥಕ್ಕೆ ಪುಷ್ಪಾರ್ಚನೆಗೈದರು. ಬಳಿಕ ಅಕ್ಷಯ್ ಹಾಗೂ ಲೀಲಾಧರ್ ಡಾ.ಕೆ.ವಿ.ರೇಣುಕಾಪ್ರಸಾದರ ಪಾದಮುಟ್ಟಿ ನಮಸ್ಕರಿಸಿದರು. ನಂತರ ರೇಣುಕಾಪ್ರಸಾದರು ಅತ್ತಿಗೆ ಶೋಭಾ ಚಿದಾನಂದರಿಗೆ, ಅಕ್ಷಯ್ ರಿಗೆ ಹಾಗೂ ಡಾ.ಲೀಲಾಧರ್ ರಿಗೆ ಶಾಲು ಹೊದಿಸಿ ಗೌರವಿಸಿದರು.