ಸುಳ್ಯ ನಗರ ಪಂಚಾಯತ್ ಅನುದಾನದಲ್ಲಿ ಅ.31 ರಂದು ಸುಳ್ಯ ನಗರದ ವಿವಿಧ ಕಡೆಗಳ ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆಯು ನಡೆಯಿತು.















5ನೇ ವಾರ್ಡ್ ಹಳೆ ಗೇಟ್ ಇದರ ಬೆಟ್ಟಂಪಾಡಿ ರಾಧಾಕೃಷ್ಣ ನಾಯಕ್ ರವರ ಮನೆ ಬಳಿ ಮೂರು ಲಕ್ಷದಲ್ಲಿ ರಸ್ತೆಗೆ ಕಾಂಕ್ರೀಟೀಕರಣ, ಶಾಂತಿನಗರ ಕ್ರೀಡಾಂಗಣದ ಬಳಿ ರಸ್ತೆಗೆ ಕಾಂಕ್ರೀಟೀಕರಣಕ್ಕೆ 3 ಲಕ್ಷ, ಪ್ರೊ. ಕುಸುಮಾಧರರವರ ಮನೆಯ ಎದುರು ರಸ್ತೆಗೆ ಕಾಂಕ್ರೀಟೀಕರಣಕ್ಕೆ 4 ಲಕ್ಷ, ಪ್ರೊ. ನಿಂಗೇಗೌಡರ ಮನೆ ಮುಂದಿನ ರಸ್ತೆಗೆ ಕಾಂಕ್ರೀಟೀಕರಣಕ್ಕೆ 7 ಲಕ್ಷ, ನಿವೃತ್ತ ಪ್ರಿನ್ಸಿಪಾಲ್ ಉಮ್ಮರ್ ರವರ ಮನೆಯ ಬಳಿ ಪಟ್ಟಣ ಪಂಚಾಯತ್ ಅಧ್ಯಕ್ಷರ ವಿಶೇಷ ಅನುದಾನದಲ್ಲಿ ಒಂದು ಲಕ್ಷ ಕಾಂಕ್ರೀಟೀಕರಣಕ್ಕೆ ಒಟ್ಟು 18 ಲಕ್ಷದ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎ .ಟಿ ಕುಸುಮಾದರ, ಕಾರ್ಯದರ್ಶಿ ಎಸ್.ಎಂ ನಾರಾಯಣ, ಪ್ರೊ
ನಿಂಗೇಗೌಡ , ಕೇಶವ ಮಾಸ್ತರ್, ಅಜೀಜ್, ಹಳೆಗೇಟ್ ಬೂತಿನ ಪ್ರಧಾನ ಕಾರ್ಯದರ್ಶಿ ಚಿದಾನಂದ, ವಿಜಯಕುಮಾರ್ ಕುಮಾರ್ , ಉಮ್ಮರ್ ಪ್ರಿನ್ಸಿಪಾಲ್, ರಾಧಾಕೃಷ್ಣ ನಾಯಕ್, ಸುಂದರ ಕೇನಾಜೆ, ನವನೀತ್, ಹರೀಶ್, ಕರುಣಾಕರ ಗೌಡ ಸೇರ್ಕಗೆ, ನಗರ ಪಂಚಾಯತ್ ಸದಸ್ಯರಾದ ನಾರಾಯಣ ಪಿಆರ್, ಸುಧಾಕರ, ಬೂತ್ ಸಮಿತಿ ಸದಸ್ಯರಾದ ಸಿಂಧೂರ ಶೇಟ್, ಸೌಮ್ಯ ರಾವ್ , ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಬಸವರಾಜ್ ಮತ್ತು ಸತೀಶ್ ರವರು ಉಪಸ್ಥಿತರಿದ್ದರು.
ಐದನೇ ವಾರ್ಡಿನ ಸದಸ್ಯ ಹಾಗೂ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಿ.ಬುದ್ಧ ನಾಯ್ಕ ಸ್ವಾಗತಿಸಿ, ವಂದಿಸಿದರು.










