ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ವಾರ್ಷಿಕ ಕ್ರೀಡಾಕೂಟ – ಉಡಾನ್ 2025

0

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ವಾರ್ಷಿಕ ಕ್ರೀಡಾಕೂಟ ‘ಉಡಾನ್ -2025’ ನ. 04 ರಿಂದ ನ. 10 ರ ವರೆಗೆ ನಡೆಯಲ್ಲಿದ್ದು, ಕ್ರೀಡಾಕೂಟದ ಉದ್ಘಾಟನೆಯನ್ನು ನ. 04 ರಂದು ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಆರ್ಕಿಟೆಕ್ಟ್. ಅಕ್ಷಯ್ ಕೆ ಸಿ ಇವರು ದೀಪ ಬೆಳಗಿಸಿ ವಾರ್ಷಿಕ ಕ್ರೀಡಾ ಕೂಟದ ಲಾಂಛನವನ್ನು ಪ್ರಕಟಿಸುವುದರ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯಿಂದ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕೆ ವಿ ಜಿ ಮೆಡಿಕಲ್ ಕಾಲೇಜ್ ನ ರಿಜಿಸ್ಟ್ರಾರ್ ಡಾ. ಸಂದೇಶ್ ರೈ ಎಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿಯಾದ ಡಾ. ವಿನಯ್ ಶಂಕರ್ ಭಾರಧ್ವಾಜ್ ಬಿ., ವಾರ್ಷಿಕ ಕ್ರೀಡಾಕೂಟದ ಸಂಚಾಲಕರಾದ ಡಾ. ಹರ್ಷವರ್ಧನ ಕೆ, ವಾರ್ಷಿಕ ಕ್ರೀಡಾ ಸಮಿತಿಯ ಸದಸ್ಯರುಗಳು, ಕಾಲೇಜಿನ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು, ಕಲಿಕಾ ವೈದ್ಯರುಗಳು ಹಾಗೂ ಸ್ನಾತ್ತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಕ್ರೀಡಾಹಬ್ಬದಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಕೂಟವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಸಂಭ್ರಮೋಲ್ಲಾಸದಿಂದ ಮತ್ತು ತೀವ್ರ ಪೈಪೋಟಿಯೊಂದಿಗೆ ಹುಮ್ಮಸ್ಸಿನಿಂದ ಭಾಗವಹಿಸಲ್ಲಿದ್ದಾರೆ.