ಡಾ.ಕೆ.ವಿ.ರೇಣುಕಾಪ್ರಸಾದರ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥಕ್ಕೆ ಎಲಿಮಲೆಯಲ್ಲಿ ಅಭೂತಪೂರ್ವ ಸ್ವಾಗತ

0

ಡಾ.ಕೆ.ವಿ.ರೇಣುಕಾಪ್ರಸಾದರವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ಇಂದು ಬೆಳಿಗ್ಗೆ ಸುಳ್ಯದಿಂದ ಹೊರಟು ಎಲಿಮಲೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿತು.

ಎಲಿಮಲೆಯಲ್ಲಿ ಲ್ಲಿ ನಾಗರಿಕರು, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕ ಬಳಗದವರು ರಥಕ್ಕೆ ಭಕ್ತಿ ಪೂರ್ವಕ ಸ್ವಾಗತ ಕೋರಿದರು. ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಬೆಳ್ಳಿರಥವನ್ನು ನೋಡಿ ಕಣ್ತುಂಬಿಗೊಂಡರು. ಸೇರಿದವರೆಲ್ಲರೂ ಬೆಳ್ಳಿ ರಥಕ್ಕೆ ಪುಷ್ಪಾರ್ಚನೆಗೈದರು.


ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಶೇಖರ ಭಟ್ ತಳೂರು, ನಿತ್ಯಾನಂದ ಮುಂಡೋಡಿ, ಎ. ವಿ. ತೀರ್ಥರಾಮ, ಶ್ರೀಧರ ಗೌಡ ಕೆರೆಮೂಲೆ, ವಿಷ್ಣು ಭಟ್ ಮೂಲೆತೋಟ, ಹರೀಶ್ ಕಂಜಿಪಿಲಿ, ಮುರಳಿಧರ ಪುನುಕುಟ್ಟಿ, ಹರಿಪ್ರಸಾದ್ ಬಿ. ವಿ. ಎಲಿಮಲೆ, ಉದಯ ಚಳ್ಳ, ರಾಜೇಶ್ ಅಂಬೆಕಲ್ಲು, ಮಹಾವೀರಅ ಜೈನ್ ಬಲ್ನಾಡು, ಪುರುಷೋತಮ ಸುಳ್ಳಿ, ಜಯಾನಂದ ಪಟ್ಟೆ, ಗದಾಧರ ಬಾಳುಗೋಡು ಮೊದಲಾದವರು ಉಪಸ್ಥಿತರಿದ್ದರು.