ಡಾ.ಕೆ.ವಿ.ರೇಣುಕಾಪ್ರಸಾದರ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥಕ್ಕೆ ದೊಡ್ಡತೋಟದಲ್ಲಿ ಅದ್ದೂರಿಯ ಸ್ವಾಗತ

0

ಡಾ.ಕೆ.ವಿ.ರೇಣುಕಾಪ್ರಸಾದರವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ಇಂದು ಬೆಳಿಗ್ಗೆ ಸುಳ್ಯದಿಂದ ಹೊರಟು ದೊಡ್ಡತೋಟದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿತು.
ದೊಡ್ಡತೋಟದಲ್ಲಿ ನಾಗರಿಕರು ರಥಕ್ಕೆ ಭಕ್ತಿ ಪೂರ್ವಕ ಸ್ವಾಗತ ಕೋರಿದರು. ಜನರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಬೆಳ್ಳಿರಥವನ್ನು ನೋಡಿ ಕಣ್ತುಂಬಿಗೊಂಡರು.


ಈ ಸಂದರ್ಭದಲ್ಲಿ ಪ್ರಮುಖರಾದ ಹರೀಶ್ ಕಂಜಿಪಿಲಿ, ರಾಜರಾಮ್ ಭಟ್ ಬೆಟ್ಟ, ಮಹೇಶ್ ಮೇರ್ಕಜೆ, ರಾಘವ ಗೌಡ ಕಂಜಿಪಿಲಿ, ಪ್ರವೀಣ್ ರಾವ್, ಪ್ರಶಾಂತ್ ರೈ ಪಾರೆಪ್ಪಾಡಿ, ಗಣೇಶ್ ರೈ ಪಾರೆಪ್ಪಾಡಿ, ಗೋವಿಂದ ಅಳಪುಪಾರೆ ಮೊದಲಾದವರು ಉಪಸ್ಥಿತರಿದ್ದರು.