















ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇದರ ವತಿಯಿಂದ ಪಂಚಸಪ್ತತಿ 2025 ಸ್ವಚ್ಚತಾ ಅಭಿಯಾನದ ಅಂಗವಾಗಿ ಮಂಡೆಕೋಲು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು .ಅಂಗನವಾಡಿ ಮಕ್ಕಳಿಗೆ ಕೈ ತೊಳೆಯುವ ಕ್ರಮಗಳ ಬಗ್ಗೆ ವಿಶೇಷ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಯಿತು .

ಆರೋಗ್ಯ ಸಮುದಾಯ ಅಧಿಕಾರಿ ಶ್ರೀಮತಿ ಪವಿತ್ರ ರವರು ಪುಟಾಣಿಗಳಿಗೆ ಕೈ ತೊಳೆಯುವ ವಿಧಾನವನ್ನು ಹಾಗೂ ಆರೋಗ್ಯದ ಸ್ವಚ್ಚತೆ ಬಗ್ಗೆ ತಿಳಿಸಿಕೊಟ್ಟರು . ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷೆ ಶ್ರೀಮತಿ ವಿನುತ ಪಾತಿಕಲ್ಲು , ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಅಂಗನವಾಡಿ ಕಾರ್ಯಕರ್ತೆ ವಾರಿಜಾ, ಗ್ರಾಮ ಪಂಚಾಯತ್ ಸದಸ್ಯೆ ಪ್ರಶಾಂತಿ , ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷರಾದ ಶ್ರೀಮತಿ ವಸಂತಿ ಉಗ್ರಾಣಿಮನೆ, , ಸಂಘದ ಸದಸ್ಯರುಗಳು ಆಶಾ ಕಾರ್ಯಕರ್ತೆಯರು , ಉಪಸ್ಥಿತರಿದ್ದರು .










