ಪುತ್ತೂರಿನಿಂದ ಸುಳ್ಯಕ್ಕೆ ಬಂದು ಮಡಿಕೇರಿಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿದ್ದ ಲಗೇಜ್ ಬಿದ್ದು ಹೋಗಿದೆ.















ಬೆಂಗಳೂರಿನ ಕಿಶೋರ್ ಎಂಬವರು ನ.6ರಂದು ಪುತ್ತೂರಿನಿಂದ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಬಂದ ಅವರು, ತಮ್ಮ ಲಗೇಜ್ ಬ್ಯಾಗನ್ನು ಬಸ್ ನ ಲಗೇಜ್ ಬಾಕ್ಸ್ ನಲ್ಲಿ ಹಾಕಿದ್ದರು. ಬಸ್ ಸುಳ್ಯಕ್ಕೆ ಬಂದು ಮಡಿಕೇರಿಗೆ ಹೋಗಿದೆ. ಮಡಿಕೇರಿಯಲ್ಲಿ ಕಿಶೋರ್ ರವರು ಲಗೇಜ್ ಬಾಕ್ಸ್ ನೋಡಿದಾಗ ತಮ್ಮ ಬ್ಯಾಗ್ ಇರಲಿಲ್ಲ. ಇದರಿಂದ ಆತಂಕಗೊಂಡು ಅವರು ಬಸ್ ನವರನ್ನು ವಿಚಾರಿಸಿದರು. ಹುಡುಕಾಡಿದರೂ ಸಿಗಲಿಲ್ಲ. ಬಳಿಕ ಅವರು ಮಡಿಕೇರಿಯಿಂದ ಬ್ಯಾಗ್ ಗಾಗಿ ಸುಳ್ಯಕ್ಕೆ ಬಂದಿದ್ದಾರೆ. ನೀಲಿ ಬಣ್ಣದ ಬ್ಯಾಗ್ ಇದಾಗಿದ್ದು ಯಾರಿಗಾದರೂ ಸಿಕ್ಕಿದರೆ ಸುದ್ದಿ ಸೆಂಟರ್ ಸುಳ್ಯಕ್ಕೆ ತಲುಪಿಸಬಹುದು.
ಕಿಶೋರ್ ವೀಣೆ ವಾದಕರಾಗಿದ್ದು ಅದಕ್ಕೆ ಸಂಬಂಧಿಸಿದ ವಸ್ತುಗಳು ಆ ಬ್ಯಾಗ್ ನಲ್ಲಿದ್ದವು ಎಂದು ಅವರು ಸುದ್ದಿ ಕಚೇರಿಗೆ ಬಂದು ಮಾಹಿತಿ ನೀಡಿದ್ದಾರೆ.










