ಕುಕ್ಕೆಸುಬ್ರಹ್ಮಣ್ಯದಲ್ಲಿ ಪ.ಪೂ ವಿಭಾಗದ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟ

0


ಬಾಲಕಿಯರಲ್ಲಿ ದಕ್ಷಿಣ ಕನ್ನಡ ಮತ್ತು ಬಾಲಕರಲ್ಲಿ ಉಡುಪಿ ಜಿಲ್ಲೆಗೆ ಚಾಂಪಿಯನ್ ಗರಿ


ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಪಿ.ಯು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜು ವಿಭಾಗದ ಬಾಲಕ- ಬಾಲಕಿಯರ ರಾಜ್ಯ ಮಟ್ಟದ ನೆಟ್‌ಬಾಲ್ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಾಲಕರ ವಿಭಾಗದಲ್ಲಿ ಉಡುಪಿ ಜಿಲ್ಲೆ ಚಾಂಪಿಯನ್ ಗರಿಯನ್ನು ತನ್ನದಾಗಿಸಿಕೊಂಡಇತು.ಈ ಮೂಲಕ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಯಿತು. ಬಾಲಕಿಯರಲ್ಲಿ ಮಂಡ್ಯ ಹಾಗೂ ಬಾಲಕರಲ್ಲಿ ಬೆಂಗಳೂರು ಉತ್ತರ ತಂಡವು ದ್ವಿತೀಯ ಸ್ಥಾನಿಯಾಯಿತು.


ಬಾಲಕಿಯರ ಪಂದ್ಯಾಟ:
ಜಿದ್ದಾಜಿದ್ದಿನಿಂದ ಕೂಡಿದ ಬಾಲಕಿಯರ ವಿಭಾಗದ ಅಂತಿಮ ಹಣಾಹಣಿಯಲ್ಲಿ ದ.ಕವು ಮಂಡ್ಯವನ್ನು (೨೦-೧೬) ಅಂಕಗಳಿಂದ ಸೋಲಿಸಿತು.ಕೇವಲ ೪ ಅಂಕಗಳಿಂದ ಸೋತ ಮಂಡ್ಯವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.ಸೆಮಿಪೈನಲ್‌ನಲ್ಲಿ ದ.ಕವು ಬೆಂಗಳೂರು ಉತ್ತರ ತಂಡವನ್ನು (೨೩-೧೩) ಅಂಕಗಳಿಂದ ಪರಾಜಿತಗೊಳಿಸಿದರೆ, ಮಂಡ್ಯವು ಹಾಸನವನ್ನು (೨೫-೨೪) ಅಂಕಗಳಿಂದ ಸೋಲಿಸಿ ಪೈನಲ್‌ಗೆ ಏರಿತ್ತು. ಬೆಂಗಳೂರು ಉತ್ತರ ಮತ್ತು ಹಾಸನ ತಂಡಗಳು ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನ ಗಳಿಸಿತು.


ಬಾಲಕರ ಪಂದ್ಯಾಟ:
ರೋಚಕತೆಯಿಂದ ಕೂಡಿದ ಬಾಲಕರ ವಿಭಾಗದ ಅಂತಿಮ ಪಂದ್ಯಾಟದಲ್ಲಿ ಉಡುಪಿಯು ಬೆಂಗಳೂರು ಉತ್ತರ ತಂಡವನ್ನು
(೧೬-೧೪) ಅಂಕಗಳಿಂದ ಸೋಲಿಸಿತು.ಕೇವಲ ೨ ಅಂಕಗಳಿಂದ ಸೋತ ಬೆಂಗಳೂರು ಉತ್ತರವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.ಸೆಮಿಪೈನಲ್‌ನಲ್ಲಿ ಉಡುಪಿಯು ಹಾಸನವನ್ನು (೨೩-೧೯) ಅಂಕಗಳಿಂದ ಪರಾಜಿತಗೊಳಿಸಿದರೆ, ಬೆಂಗಳೂರು ಉತ್ತರವು ತುಮಕೂರು ತಂಡವನ್ನು (೩೫-೦೪) ಅಂಕಗಳಿಂದ ಸೋಲಿಸಿ ಪೈನಲ್‌ಗೆ ಏರಿತ್ತು. ಹಾಸನ ಮತ್ತು ತುಮಕೂರು ತಂಡವು ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನ ಗಳಿಸಿತು.


ಬಹುಮಾನ ವಿತರಣೆ:
ಶಾಸಕಿ ಭಾಗೀರಥಿ ಮುರುಳ್ಯ ಚಾಂಪಿಯನ್ ಪುರಸ್ಕಾರ ಪ್ರಧಾನ ಮಾಡಿದರು. ಪದವಿಪೂರ್ವ ಕಾಲೇಜು ವಿಭಾಗದ ದ.ಕ ಜಿಲ್ಲಾ ಉಪನಿರ್ದೇಶಕಿ ರಾಜೇಶ್ವರಿ ಎಚ್.ಎಚ್, ಪದವಿಪೂರ್ವ ಶಿಕ್ಷಣ ಇಲಾಖೆಯ ವೀಕ್ಷಕ ಗೋಪಾಲಕೃ?, ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಜಯಪ್ರಕಾಶ್.ಆರ್,ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಕಾರ್ಯದರ್ಶಿ ನವೀನ್ ಹೆಗ್ಡೆ, ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃ? ಚಿದ್ಗಲ್, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್. ಎಸ್, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಉಪಾಧ್ಯಕ್ಷ ಗುಣವರ್ಧನ ಕೆದಿಲ, ರಾಜ್ಯ ಶಿಕ್ಷಣ ಇಲಾಖೆಯ ಚಂದ್ರಶೇಖರ್,ದ.ಕ ಜಿಲ್ಲಾ ಶಿಕ್ಷಣ ಇಲಾಖೆಯ ಮಲ್ಲಿಕಾ, ಸತೀಶ್ ಬಹುಮಾನ ವಿತರಿಸಿದರು.

ಗೌರವಾರ್ಪಣೆ:
ಕ್ರೀಡಾ ಪಂದ್ಯಾಟಕ್ಕೆ ಸಹಕಾರ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ,ದ.ಕ ಜಿಲ್ಲಾ ಉಪನಿರ್ದೇಶಕಿ ರಾಜೇಶ್ವರಿ ಎಚ್.ಎಚ್, ಪದವಿಪೂರ್ವ ಶಿಕ್ಷಣ ಇಲಾಖೆಯ ವೀಕ್ಷಕ ಗೋಪಾಲಕೃ?, ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪನ್ಯಾಸಕಿಯರಾದ ಸೌಮ್ಯಾ ದಿನೇಶ್ ಮತ್ತು ಶ್ರುತಿ ಅಶ್ವತ್ಥ್ ಕಾರ್ಯಕ್ರಮ ನಿರೂಪಿಸಿದರು.