ಸುದ್ದಿ ವೆಬ್ಸೈಟ್ ನಲ್ಲಿ ವರದಿ ಬಿತ್ತರ: ಸ್ಪಂದಿಸಿದ ಸ್ಥಳೀಯ ನ. ಪಂ ಸದಸ್ಯರು
ಸುಳ್ಯ ನಗರ ಪಂಚಾಯತ್ ಹಳೆಗೇಟು ವಾರ್ಡಿನಲ್ಲಿ ಗುಂಡಿಯಡ್ಕ ಸಮೀಪ ವಾರ್ಡ್ ಸದಸ್ಯರ ಮನೆಯ ಬಳಿ ಒಂದು ವಾರದಿಂದ ಕುಡಿಯುವ ನೀರು ಬಾರದೆ ಸ್ಥಳೀಯ ಕೆಲವು ಮನೆಗಳಲ್ಲಿ ಜನರು ಸಂಕಷ್ಟದಲ್ಲಿದ್ದರು.
















ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ಸುದ್ದಿ ಯೊಂದಿಗೆ ದೂರಿ ಕೊಂಡಿದ್ದರು.ಅಲ್ಲದೆ ಅಮೃತ್ ಯೋಜನೆಯ ನೀರಿನ ಪೈಪಳವಡಿಕೆಗೆ ಮಾಡಿರುವ ಕಾಮಗಾರಿಯಿಂದ ಹಳೆ ಪೈಪ್ ಒಡೆದು ನೀರು ಬಾರದೆ ಇರುವ ಕಾರಣ ಎಂದು ಹೇಳುತ್ತಿದ್ದು ಅದನ್ನು ಅವರೇ ಸರಿ ಪಡಿಸಬೇಕೆಂದು ಸಂಬಂಧಪಟ್ಟವರು ಹೇಳುತ್ತಿದ್ದಾರೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.
ಈ ಕುರಿತು ನ 4 ರಂದು ಬೆಳಿಗ್ಗೆ ಸುದ್ದಿ ವೆಬ್ಸೈಟ್ ಮೂಲಕ ವರದಿ ಮಾಡಿ ಅಧಿಕಾರಿಗಳ ಮತ್ತು ಸ್ಥಳೀಯ ಸದಸ್ಯರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸ್ಥಳೀಯ ನಗರ ಪಂಚಾಯತ್ ಸದಸ್ಯರು ಹಾಗೂ ಪಂಚಾಯತ್ ಅಧಿಕಾರಿಗಳು ಅದೇ ದಿನ ಪೈಪಿನ ದುರಸ್ಥಿಕರಣ ಮಾಡಿಸಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಿ ಕೊಟ್ಟಿದ್ದಾರೆ.
ಇವರ ಸ್ಪಂದನೆಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.










