















ನ. 08 ರಂದು ಸೂರ್ಯ ಸ್ವಸಹಾಯ ಸಂಘದ ವತಿಯಿಂದ ಗ್ರಾಮ ಪಂಚಾಯತ್ ಪೆರಾಜೆಯ ಸಹಕಾರದೊಂದಿಗೆ “ಗ್ರಾಮಕ್ಕಾಗಿ ಒಂದು ದಿನ” ಅಭಿಯಾನ ಹಮ್ಮಿಕೊಳ್ಳಲಾಯಿತು. ಈ ಪ್ರಯುಕ್ತ ಪುತ್ಯದಿಂದ ಕುಂಬಳಚೇರಿ ತನಕ ರಸ್ತೆ ದುರಸ್ತಿ ಶ್ರಮದಾನ ಕಾರ್ಯವನ್ನು ಮಾಡಲಾಯಿತು. ಸೂರ್ಯ ಸ್ವಸಹಾಯ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಮಜಿಕೋಡಿ ಹಾಗೂ ಹಾಗೂ ಶುಭಾಶ್ಚಂದ್ರ ಬಂಗಾರಕೋಡಿ ಅವರು ಉಪಸ್ಥಿತರಿದ್ದರು.










