ಕನಕಮಜಲು : ಸಹಕಾರಿ ಸಪ್ತಾಹ ಪ್ರಯುಕ್ತ ಕ್ರೀಡಾಕೂಟಕ್ಕೆ ಚಾಲನೆ

0

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಜಾಲ್ಸುರು ಇದರ ಆಶ್ರಯದಲ್ಲಿ
72ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಪ್ರಯುಕ್ತ ಕ್ರೀಡಾಕೂಟ ಕನಕಮಜಲಿನ ದ.ಕ.ಜಿ.ಪ ನರಿಯೂರು ಶ್ರೀ ರಾಮಣ್ಣ ಗೌಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 9 ರಂದು ನಡೆಯಿತು.

ಕನಕಮಜಲು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಹಮೀದ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ಸಹಕಾರಿ ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ ದೇರ್ಕಜೆ, ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಹಕಾರಿ ಸಂಘದ ನಿರ್ದೇಶಕ ನಿರಂಜನ ಬೊಳುಬೈಲು ವಂದಿಸಿದರು. ತೀರ್ಥರಾಮ ಕಣಜಾಲು, ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು, ಸಿಬ್ಬಂದಿವರ್ಗ ಭಾಗವಹಿಸಿದ್ದಾರೆ.

ತಾಲೂಕಿನ ಸಹಕಾರ ಸಂಘಗಳಿಗೆ ಕ್ರಿಕೆಟ್, ಮಹಿಳೆಯರಿಗೆ ಶಾಟ್ ಪುಟ್, ಹಗ್ಗಜಗ್ಗಾಟ, ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಹಗ್ಗಜಗ್ಗಾಟ, ಲಕ್ಕಿ ಸ್ಟಾರ್‌ಗೇಮ್, ಜಾಲ್ಸುರು ಮತ್ತು ಕನಕಮಜಲು ಗ್ರಾಮದ ಸಾರ್ವಜನಿಕರಿಗೆ ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್, ಪುರುಷರಿಗೆ ಗೋಣಿಚೀಲ ಓಟ, 60 ವರ್ಷ ಮೇಲ್ಪಟ್ಟ ಹಿರಿಯರಿಗೆ ವೇಗದ ನಡಿಗೆ, ಮಹಿಳೆಯರಿಗೆ ಇಟ್ಟಿಗೆ ಎತ್ತುವ ಸ್ಪರ್ಧೆ ನಡೆಯುತ್ತಿದೆ.