300 ವಿದ್ಯಾರ್ಥಿಗಳು ಭಾಗಿ

ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಪಂಚ ಸಪ್ತತಿ ಕಾರ್ಯಕ್ರಮ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಸುಳ್ಯ ತಾಲೂಕು ಮತ್ತು ಕಡಬ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣ ಸಂಗಮ ೨೦೨೫ ನ. ೯ರಂದು ಸುಳ್ಯದ ಗೌಡ ಸಮುದಾಯಭವನ ಕೊಡಿಯಾಲಬೈಲು ಇಲ್ಲಿ ನಡೆಯಿತು.
















ಕಾರ್ಯಕ್ರಮದ ಉದ್ಘಾಟನೆಯನ್ನು ಯುವಜನ ಸಂಯುಕ್ತ ಮಂಡಳಿಯ ಮಾಜಿ ಅಧ್ಯಕ್ಷರು, ಗೌಡರ ಯುವ ಸೇವಾ ಸಂಘ ಸುಳ್ಯ ಇದರ ಅಧ್ಯಕ್ಷರೂ ಆದ ಪಿ.ಎಸ್.ಗಂಗಾಧರ ಉದ್ಘಾಟಿಸಿದರು. ಮಂಡಳಿಯ ಗೌರವ ಸಲಹೆಗಾರ ಹಾಗೂ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಮುಖ್ಯ ಅತಿಥಿಯಾಗಿದ್ದರು. ಯುವ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಮಂಡಳಿ ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ಲೋಹಿತ್ ಬಾಳಿಕಳ, ವರ್ಣ ಸಂಗಮ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ವಿನುತಾ ಪಾತಿಕಲ್ಲು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್‌ಕೆಜಿಯಿಂದ ತೊಡಗಿ 1೦ನೇ ತರಗತಿವರೆಗೆಇನ ಸುಮಾರು 3೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 4 ತಂಡಗಳನ್ನಾಗಿ ಮಾಡಿ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು. ವಿಜೇತರಿಗೆ ಬಹುಮಾನ ವಿತರಣೆಯನ್ನು ನ. ೧೬ರಂದು ಮಧ್ಯಾಹ್ನ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.











