ನ.11: ಪಂಜದಲ್ಲಿ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನ

0

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು,ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ದಕ್ಷಿಣ ಕನ್ನಡ ಜಿಲ್ಲೆ , ಗ್ರಾಮ ಪಂಚಾಯತ್ ಪಂಜ, ಹಾಲು ಉತ್ಪಾದಕರ ಸಹಕಾರ ಸಂಘ ಪಂಜ ಇದರ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 8 ನೇ ಸುತ್ತಿನ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನ
ನ.11 ರಂದು ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮದಲ್ಲಿ ನಡೆಯಲಿದೆ. ಅಂದು ಹೈನುಗಾರರು ಲಸಿಕೆದಾರರ ಸಂಪರ್ಕದಲ್ಲಿರ ಬೇಕು. ಜಾನುವಾರುಗಳನ್ನು
ಹಟ್ಟಿ ಅಥವಾ ಪರಿಸರದಲ್ಲಿ ಕಟ್ಟಿ . ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.