ಬಳ್ಪ ಗ್ರಾಮದ ಚನ್ನಕೇಶವ ಜೋಗಿ ಮನೆ ಎಂಬವರು ಕಾಣೆಯಾಗಿರುವುದಾಗಿ ವರದಿಯಾಗಿದೆ.















ಸುಬ್ಬಪ್ಪ ಗೌಡ ಎಂಬವರ ಪುತ್ರರಾಗಿರುವ ಇವರಿಗೆ
61 ವರ್ಷ ವಯಸ್ಸಾಗಿದೆ. ಮಾ.11 ರಂದು ಗಾರೆ ಕೆಲಸಕ್ಕೆಂದು ಹೋಗುತ್ತೆನೆಂದು ಹೇಳಿ ಹೋದವರು ಮತ್ತೆ ಮನೆಗೆ ಬಂದಿಲ್ಲ ಎಂದು ಮನೆಯವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಇವರು ಪತ್ತೆಯಾದಲ್ಲಿ ಸುಬ್ರಹ್ಮಣ್ಯ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.










