ಅಗ್ನಿವೀರ್ ಗೆ ಆಯ್ಕೆಗೊಂಡ ನಿಖಿತ್ ಬಿ.ಎಸ್. ಬೊಳುಬೈಲುಗೆ ಅಭಿನಂದನಾ ಗೌರವ

0

ಜಾಲ್ಸೂರು ಗ್ರಾಮದ ಬೊಳುಬೈಲು ಸರೋಜ ಶಿವರಾಮ ಇವರ ಪುತ್ರರಾದ ನಿಖಿತ್ ಬಿ.ಎಸ್ ಇವರು ಮಂಗಳೂರಿನಲ್ಲಿ ನಡೆದ ಲಿಖಿತ ಪರೀಕ್ಷೆ ಹಾಗೂ ಉಡುಪಿಯಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಗ್ನಿವೀರ್ ಗೆ ಆಯ್ಕೆಗೊಂಡಿರುತ್ತಾರೆ.
ಆರಂಭದಲ್ಲಿ ಮಹಾರಾಷ್ಟ್ರದ ಅಹಮದಾನಗರದಲ್ಲಿ ತರಬೇತಿಯನ್ನು ಪಡೆದುಕೊಂಡು ಇದೀಗ ಪಂಜಾಬ್‌ ನ ಪಠಾಣ್ ಕೋಟ್ ಇಲ್ಲಿ ದೇಶ ಸೇವೆಗಾಗಿ ನಿಯುಕ್ತಿಗೊಂಡು ದೇಶ ಸೇವೆ ಸಲ್ಲಿಸುತ್ತಿದ್ದಾರೆ.
ಇವರನ್ನು ಭಾರತೀಯ ಜನತಾ ಪಾರ್ಟಿ ಬೊಳುಬೈಲು ಬೂತ್ ಸಮಿತಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ಶಿವಪ್ರಸಾದ್ ರೈ ಪಿಲಿಕೋಡಿ, ಬೂತ್ ಕಾರ್ಯದರ್ಶಿ ಚಿತ್ತರಂಜನ್ ಕೆ.ಟಿ. ಬೊಳುಬೈಲು,
ಕನಕಮಜಲು ಪ್ರಾ.ಕೃ.ಪ.ಸ.ಸಂ. ಜಾಲ್ಸೂರು ಇದರ ಆಡಳಿತ ಮಂಡಲಿಯ ನಿರ್ದೇಶಕರಾದ ಕುಸುಮಾಧರ ಗೌಡ ಅರ್ಭಡ್ಕ, ಮಾಜಿ ನಿರ್ದೇಶಕರಾದ ಕರುಣಾಕರ ರೈ ಕುಕ್ಕಂದೂರು, ಜಾಲ್ಸೂರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ಭುವನೇಂದ್ರ ಕೆ.ಪಿ ಬೊಳುಬೈಲು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೊಳುಬೈಲು ಒಕ್ಕೂಟದ ಅಧ್ಯಕ್ಷರಾದ ಪದ್ಮನಾಭ ನೆಕ್ರಾಜೆ, ವೆಂಕಟೇಶ್ ನಡುಬೆಟ್ಟು, ಸುಭಾಷ್ ರೈ ಕುಕ್ಕಂದೂರು, ನವೀನ್ ಆರ್ತಾಜೆ, ಸುದೀಪ್ ರೈ ಕುಕ್ಕಂದೂರು, ತಿಲಕಾ ನವೀನ್ ಆರ್ತಾಜೆ, ಬೂತ್ ಸಮಿತಿಯ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಗೂ ನಿಖಿತ್ ಇವರ ಮನೆಯವರು ಉಪಸ್ಥಿತರಿದ್ದರು.