ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥದಲ್ಲಿ ಡಾ.ರೇಣುಕಾಪ್ರಸಾದ್ ರಿಂದ ಪ್ರಥಮ ಬೆಳ್ಳಿರಥೋತ್ಸವ ಸೇವೆ

0

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥವನ್ನು ಸಮರ್ಪಿಸಿರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ ಬಿ ಟೀಮ್ ಅಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದ್ ರವರು ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಪ್ರಥಮವಾಗಿ ಬೆಳ್ಳಿರಥೋತ್ಸವ ಸೇವೆ ನೆರವೇರಿಸುತ್ತಿದ್ದಾರೆ.


ಡಾ.ರೇಣುಕಾಪ್ರಸಾದರು, ಅವರ ಪತ್ನಿ ಡಾ.ಜ್ಯೋತಿ ರೇಣುಕಾಪ್ರಸಾದರು, ಪುತ್ರಿ ಡಾ.ಅಭಿಜ್ಞಾ ಹಾಗೂ ಅಳಿಯ ಗೋಕುಲ್, ಪುತ್ರ ಮೌರ್ಯ ಆರ್.ಪ್ರಸಾದ್, ಅತ್ತೆ, ಮಾವ, ಅವರ ಶಿಕ್ಷಣ ಸಂಸ್ಥೆಗಳ ವಿವಿಧ ಸಮಿತಿಗಳ ಪ್ರಮುಖರು, ಉದ್ಯೋಗಿಗಳು, ಹಲವು ವಿದ್ಯಾರ್ಥಿಗಳು ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ನಿರ್ವಹಿಸುತ್ತಿದ್ದಾರೆ.

.

.

.
ಸಂಸದ ಕ್ಯಾ.ಬ್ರಿಜೇಶ್ ಚೌಟರು, ಹಲವು ಮುಖಂಡರು ಉಪಸ್ಥಿತರಿದ್ದು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ಆರಂಭದಲ್ಲಿ ದೇವಳದ ಒಳಭಾಗದ ಅಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ದೇವರ ಬಲಿ ನಡೆಸಲಾಯಿತು. ಬಳಿಕ ಬೆಳ್ಳಿರಥದಲ್ಲಿ ದೇವರನ್ನು ಕೂರಿಸಿ, ತೇರನ್ನು ಎಳೆಯಲಾಯಿತು.