ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ.ರೇಣುಕಾಪ್ರಸಾದ್ ರವರಿಂದ ಬೆಳ್ಳಿರಥ ಸಮರ್ಪಣೆ

0

ಪ್ರಥಮ ಬೆಳ್ಳಿರಥೋತ್ಸವದಲ್ಲಿ ಪಾಲ್ಗೊಂಡ ಸಂಸದ ಕ್ಯಾ. ಬ್ರಿಜೇಶ್ ಚೌಟ

ಡಾ. ಕೆ.ವಿ ರೇಣುಕಾಪ್ರಸಾದ್ ಕುಟುಂಬದವರು ಕುಕ್ಕೆ ಸುಬ್ರಮಣ್ಯ ದೇವರಿಗೆ ನೀಡಿರುವ ಬೆಳ್ಳಿರಥ ಸಮರ್ಪಣೆ ಯ ಕಾರ್ಯಕ್ರಮದ ಪ್ರಥಮ ಬೆಳ್ಳಿ ರಥೋತ್ಸವ ಸೇವೆ ಕಾರ್ಯಕ್ರಮವು ನ.10 ರಂದು ರಾತ್ರಿ ನಡೆಯಿತು. ಈ ವೇಳೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಬೆಳ್ಳಿ ರಥೋತ್ಸವ ಸೇವೆ ಸಂದರ್ಭದಲ್ಲಿ ಉಪಸ್ಥಿತರಿದ್ದು ದೇವರ ಅನುಗ್ರಹ ಪಡೆದರು.ಈ ಸಂದರ್ಭದಲ್ಲಿ ಡಾ. ಕೆ.ವಿ ರೇಣುಕಾಪ್ರಸಾದ್ ಕುಟುಂಬ ದವರು, ಸಾವಿರಾರು ಜನ ಭಕ್ತಾದಿಗಳು ಹಾಗೂ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.