ಎಸ್.ವಿ.ಎಸ್.ಹಾಲೆಮಜಲು ಪ್ರಥಮ, ಗೌಡ ಕೆಟರರ್ಸ್ ದ್ವಿತೀಯ

ಮಡಪ್ಪಾಡಿ ಗೌಡ ಕ್ರೀಡಾ ಸಮಿತಿ ಇದರ ವತಿಯಿಂದ ಸಮಸ್ತ ಒಕ್ಕಲಿಗ ಗೌಡ ಸಮಾಜದ
ಸಹಕಾರದೊಂದಿಗೆ
ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗೌಡ ಬಾಂಧವರಿಗೆ ಗೌಡ ಕಪ್ – 2025 ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ನ.8 ಮತ್ತು ನ.9 ರಂದು ಮಡಪ್ಪಾಡಿಯಲ್ಲಿ ನಡೆಯಿತು.
ಬೆಳ್ತಂಗಡಿಯ ಧಾರ್ಮಿಕ ಮುಖಂಡ ಡಿ.ಕಿರಣ್ ಚಂದ್ರ ಪುಷ್ಪಗಿರಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭಹಾರೈಸಿ ಮಾತನಾಡಿದರು.
ಗೌಡ ಕ್ರೀಡಾ ಸಮಿತಿ ಅಧ್ಯಕ್ಷ ಸುಮಂತ್ ಶೀರಡ್ಕ ಅಧ್ಯಕ್ಷತೆ ವಹಿಸಿದ್ದರು.
ಗೌರವ ಉಪಸ್ಥಿತರಾಗಿ ಶಾಸಕಿ ಭಾಗೀರಥಿ ಮುರುಳ್ಯ,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ .ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಮಖ್ಯ ಅತಿಥಿಗಳಾಗಿ ಹಲವು ಜನ ಗಣ್ಯರು ಉಪಸ್ಥಿತರಿದ್ದರು.
ಸಮಾರೋಪ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗೌಡ ಕ್ರೀಡಾ ಸಮಿತಿ ಅಧ್ಯಕ್ಷ ಸುಮಂತ್ ಶೀರಡ್ಕ ಅಧ್ಯಕ್ಷತೆ ವಹಿಸಿದ್ದರು.
















ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿದರು.
ವೇದಿಕೆಯಲ್ಲಿ ಹಲವು ಜನ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಬೆಳ್ತಂಗಡಿಯ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಹಾಗೂ ಕಿರಣ್ ಬುಡ್ಲೆಗುತ್ತುರವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ರಕ್ಷಿತ್ ಶೀರಡ್ಕ ಸ್ವಾಗತಿಸಿ, ತನುರಾಜ್ ಅಂಬೆಕಲ್ಲು ವಂದಿಸಿದರು.

ಪಂದ್ಯಾಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು ಯತೀಂದ್ರ ಕಟ್ಟೆಕೋಡಿ ಮಾಲಕತ್ವದ
ಎಸ್.ವಿ.ಎಸ್ ಹಾಲೆಮಜಲು ಪ್ರಥಮ, ಶಿವಪ್ರಕಾಶ್ ಅಡ್ಡನಪಾರೆ ಮಾಲಕತ್ವದ ಗೌಡ ಕೆಟರಸ್೯ ದ್ವಿತೀಯ ಪಡೆದುಕೊಂಡಿತು.
ತೃತೀಯ ಸ್ಥಾನವನ್ನು ಪುನೀತ್ ದುಗ್ಗಳ ಮಾಲಕತ್ವದ ಮಧುರ ಫ್ರೆಂಡ್ಸ್ ದುಗ್ಗಳ,ಮಂಜುನಾಥ ಎಂ.ಪಿ.ಮಾಲಕತ್ವದ ಡಿ.ಜೆ.ಫ್ರೆಂಡ್ಸ್ ಸುಳ್ಯ ಚತುರ್ಥ
ಸ್ಥಾನವನ್ನು ಪಡೆದುಕೊಂಡಿತು.
ಪ್ರಥಮ ಓನರ್ ಗೆ ಚಿನ್ನದ ನಾಣ್ಯದ ಕೊಡುಗೆಯನ್ನು ಕೆನಡಾ ಉದ್ಯಮಿ ಉಮೇಶ್ ಮುಂಡೋಡಿ ಹಾಗೂ ದ್ವಿತೀಯ ಓನರ್ ಗೆ ಬೆಳ್ಳಿನಾಣ್ಯವನ್ನು ಉದ್ಯಮಿ ಅನಂತರಾಜ್ ಮಾಯಿಪನಮನೆ ನೀಡಿ ಸಹಕರಿಸಿದರು.










