ಪ್ರತಿಭಟನೆಗೆ ಮುಂದಾದ ಸ್ಥಳೀಯ ಪತ್ರಕರ್ತರು
ನ.ಪಂ. ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಯವರಿಂದ ಪ್ರತಿಭಟನೆ ಮಾಡದಂತೆ ಮನವಿ
ಜಯನಗರ ರಸ್ತೆಯ ಅವ್ಯವಸ್ಥೆ ಮತ್ತು ಪತ್ರಿಕೆಯಲ್ಲಿ ವರದಿ ಮಾಡಿ ಸಾಕಾಗಿ ಪತ್ರಕರ್ತರೆ ಹೋರಾಟಕ್ಕೆ ಪತ್ರಕರ್ತರೇ ಹೋರಾಟಕ್ಕೆ ಇಳಿಯುವಂತಹ ಪರಿಸ್ಥಿತಿ ಬಂದಿದ್ದು, ಆದರೆ ಪ್ರತಿಭಟನೆ ಮಾಡದಂತೆ ನ.ಪಂ. ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಯವರು ಮನವಿ ಮಾಡಿದ್ದಾರೆ.
ಜಯನಗರ ವಾರ್ಡ್‌ನ ರಸ್ತೆಯು ಕಳೆದ ಹಲವಾರು ವರ್ಷಗಳಿಂದ ತೀರಾ ಹದಗೆಟ್ಟಿದ್ದು, ಹೊಂಡಗುಂಡಿಗಳಿಂದ ತುಂಬಿದೆ. ನನಗೂ ಸೇರಿದಂತೆ ಸಾರ್ವಜನಿಕರಿಗೂ ಸಮಸ್ಯೆಯನ್ನುಂಟುಮಾಡುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಪ್ರಶ್ನಿಸಿದ್ದರೂ ಯಾವುದೇ ಪ್ರಯೋಜನಕಾರಿಯಾಗಿಲ್ಲ.
ಈ ಕುರಿತು ಹಲವು ಬಾರಿ ಪತ್ರಿಕೆಗಳಲ್ಲಿ ವರದಿಗಳನ್ನು ಕೂಡಾ ಭಿತ್ತರಿಸಿದ್ದೇವೆ. ಅಲ್ಲದೆ ಸ್ಥಳೀಯ ನಿವಾಸಿಗಳು ಕೂಡಾ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದರು.
ಇಷ್ಟೆಲ್ಲಾ ನಡೆದಿದ್ದರೂ ಕೂಡಾ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆಯನ್ನು ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಆದ್ದರಿಂದ ಕೂಡಲೇ ರಸ್ತೆ ದುರಸ್ತಿಪಡಿಸುವಂತೆ ಆಗ್ರಹಿಸಿ ಜಯನಗರ ಸುಮಾರು ೫ ಮಂದಿ ಪತ್ರಕರ್ತರು ಸೇರಿ ಜಯನಗರ ಯುವಕ ಮಂಡಲದ ಬಳಿ ನ. ೧೧ ರಂದು ಬೆಳಿಗ್ಗೆ ೧೦ ಗಂಟೆಯಿಂದ ೧೧ ಗಂಟೆಯವರೆಗೆ ಒಂದು ಗಂಟೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲು ನಿಶ್ಚಯಿಸಿದ್ದರು.















ಆದರೆ ನಗರ ಪಂಚಾಯತ್ ಮುಖ್ಯ ಅಧಿಕಾರಿಯವರು ದೂರವಾಣಿ ಕರೆಯ ಮೂಲಕ ಮಾತನಾಡಿ ಯಾವುದೇ ಕಾರಣಕ್ಕೂ ಪತ್ರಕರ್ತರುಗಳು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಒಂದು ವಾರದ ಒಳಗಡೆ ರಸ್ತೆಯ ಕಾಮಗಾರಿಯ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ನಗರ ಪಂಚಾಯತ್ ಆಡಳಿತ ಅಧಿಕಾರಿ ತಹಶೀಲ್ದಾರ್‌ರವರನ್ನು ಸ್ಥಳಕ್ಕೆ ಬರುವಂತೆ ಮನವಿ ಮಾಡುತ್ತೇವೆ. ದಯವಿಟ್ಟು ಎರಡು ದಿನಗಳ ಕಾಲಾವಕಾಶ ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ನಾಲ್ಕು ದಿನಗಳ ಕಾಲಾವಕಾಶವನ್ನು ನೀಡಲಾಗಿದ್ದು, ಅದೊರೊಳಗೆ ಬಂದು ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಜಯನಗರ ಭಾಗದ ಪತ್ರಕರ್ತರು ತಿಳಿಸಿದ್ದಾರೆ.










