ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರೇಡಿಯೋ-ಡಯಾಗ್ನೋಸಿಸ್ ವಿಭಾಗದ ವತಿಯಿಂದ “Radiographers: Seeing the Unseen – Fostering Radiology and Radiation Awareness” ಎಂಬ ವಿಷಯದ ಅಂಗವಾಗಿ ಅಂತರರಾಷ್ಟ್ರೀಯ ರೇಡಿಯಾಲಜಿ ದಿನವನ್ನು ನ. 9ರಂದು ಆಚರಿಸಲಾಯಿತು.
ಎಒಎಲ್ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ. ರಾಮಚಂದ್ರ ಭಟ್ ಶುಭ ಹಾರೈಸಿದರು.















ರೇಡಿಯೋ-ಡಯಾಗ್ನೋಸಿಸ್ ವಿಭಾಗದ ರೇಡಿಯಾಲಜಿಸ್ಟ್ ಡಾ. ನಿತಿನ್ ಭಟ್ ರೇಡಿಯಾಲಜಿಯ ಪರಿಚಯ ನೀಡಿದರು. ರೇಡಿಯಾಲಜಿಯ ಪಿತಾಮಹ ಸರ್ ವಿಲ್ಹೆಮ್ ಕಾಂರಾಡ್ ರೋಂಟ್ಜೆನ್ ಅವರ ಸ್ಮರಣಾರ್ಥ ಪುಷ್ಪನಮನ ಸಲ್ಲಿಸಲಾಯಿತು. ಬಿ.ಎಸ್ಸಿ. ಎಂಐಟಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ತಯಾರಿಸಿದ ಎಂ.ಆರ್.ಐ ಸುರಕ್ಷತೆ ಕುರಿತ ಸಣ್ಣ ವಿಡಿಯೋ ಪ್ರದರ್ಶನ ನಡೆಯಿತು. ಹೀಲಿಯಂ-ಫ್ರೀ ಎಂ.ಆರ್.ಐ’ ಕುರಿತು ಕೆವಿಜಿ ಅಲೈಡ್ ಹೆಲ್ತ್ ಸೈನ್ಸಸ್‌ನ ಉಪನ್ಯಾಸಕಿ ಪಿ.ಸಿ. ಅರ್ಚನಾ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರಾದ ಫಾತಿಮಾ ಹಿಬಾ ಮತ್ತು ಲಿಯಾನಾ ಸನಮ್ ಅವರು 3ಟಿ ಎಂ.ಆರ್.ಐ ಕುರಿತ ಇ-ಪೋಸ್ಟರ್ ಪ್ರಸ್ತುತಪಡಿಸಿದರು.
ಪ್ಯಾರಾಮೆಡಿಕಲ್ ಮತ್ತು ಎಂಐಟಿ ತರಬೇತಿ ವಿದ್ಯಾರ್ಥಿಗಳು ರೇಡಿಯಾಲಜಿಸ್ಟ್‌ಗಳ ಪಾತ್ರವನ್ನು ಬಿಂಬಿಸುವ ಕಿರುನಾಟಕವನ್ನು ಪ್ರದರ್ಶಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಇಂಟರ್ನ್‌ಗಳಿಗಾಗಿ ಕ್ವಿಜ್ ಸ್ಪರ್ಧೆಗಳು ನಡೆಯಿತು.
ರೇಡಿಯೋಗ್ರಾಫರ್ ಮಿಥುನ್ ಪಿ.ಪಿ. ವಂದಿಸಿದರು. ಕಾರ್ಯಕ್ರಮವನ್ನು ಎಒಎಲ್ಇ ಕಾರ್ಯದರ್ಶಿ ಹಾಗೂ ರೇಡಿಯೋ-ಡಯಾಗ್ನೋಸಿಸ್ ವಿಭಾಗದ ಪ್ರಾಧ್ಯಾಪಕಿ ಡಾ. ಐಶ್ವರ್ಯ ಕೆ.ಸಿ., ಖಜಾಂಚಿ ಮತ್ತು ವಿಭಾಗದ ಮುಖ್ಯಸ್ಥ ಡಾ. ಗೌತಮ್ ಗೌಡ ಎ.ಜಿ., ಹಾಗೂ ರೇಡಿಯಾಲಜಿಸ್ಟ್ ಡಾ. ನಿತಿನ್ ಭಟ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ರೇಡಿಯೋ-ಡಯಾಗ್ನೋಸಿಸ್ ವಿಭಾಗದ ಉಪನ್ಯಾಸಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಎಂಐಟಿ ತರಬೇತಿ ವಿದ್ಯಾರ್ಥಿಗಳ ಸಂಘಟನಾ ಸಮಿತಿ ಸಹಕರಿಸಿದರು.










