ಸುಳ್ಯ ಶ್ರೀರಾಮ ಪೇಟೆಯ ರಾಮ ಮಂದಿರದಲ್ಲಿ ವರ್ಷಂಪ್ರತಿ ಜರುಗುವ ಅರ್ಧ ಏಕಾಹ ಭಜನೆ ಹಾಗೂ ಸಾಮೂಹಿಕ ದುರ್ಗಾ ಪೂಜೆಯು ಡಿ.01 ರಂದು ನಡೆಯಲಿದ್ದು
ಇದರ ಆಮಂತ್ರಣ ಪತ್ರ ಬಿಡುಗಡೆಯು ನ.11 ರಂದು ಮಂದಿರದಲ್ಲಿ ನಡೆಯಿತು.















ಮಂದಿರದಧರ್ಮದರ್ಶಿ ಕೆ. ಉಪೇಂದ್ರ ಪ್ರಭು ರವರು ಬಿಡುಗಡೆಗೊಳಿಸಿದರು. ಉಪಾಧ್ಯಕ್ಷರಾದ ಕೃಷ್ಣ ಕಾಮತ್ ಅರಂಬೂರು, ಕಾರ್ಯದರ್ಶಿ ಶ್ರೀನಿವಾಸ, ಜತೆ ಕಾರ್ಯದರ್ಶಿ ಮಹಾಬಲ ಕೇರ್ಪಳ, ಸದಸ್ಯರಾದ ಭಾಸ್ಕರ ನಾಯರ್, ಗೋಪಾಲ ಎಸ್ ನಡುಬೈಲು, ಬೆಳ್ಯಪ್ಪ ಗೌಡ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕೇರ್ಪಳ ಹಾಗೂ ಮಹಿಳಾ ಸಮಿತಿಯವರು ಉಪಸ್ಥಿತರಿದ್ದರು.










