ಸಂಪಾಜೆಯ ಮಹಿಳೆಯೊಬ್ಬರು ಗಂಭೀರ ರೇಬಿಸ್ ಕಾಯಿಲೆಗೆ ತುತ್ತಾಗಿರುವ ಘಟನೆ ವರದಿಯಾಗಿದೆ.
ನೆಲ್ಲಿ ಕುಮೇರಿಯ ಕೊಂಬೆ ಎನ್ನುವ ಮಹಿಳೆಗೆ ಇತ್ತೀಚೆಗೆ ನಾಯಿಯೊಂದು ಕಚ್ಚಿತ್ತು. ನಾಯಿ ಕಚ್ಚಿದ್ದನ್ನು ಮನೆಯಲ್ಲಿ ಯಾರಿಗೂ ತಿಳಿಸದೆ ಮಹಿಳೆ ಟಿಟಿ ಇಂಜೆಕ್ಷನ್ ಚುಚ್ಚಿಸಿಕೊಂಡು ಸುಮ್ಮನಾಗಿದ್ದರು. ಆದರೆ 40 ದಿನದ ಬಳಿಕ ಅವರಲ್ಲಿ ರೇಬಿಸ್ ಲಕ್ಷಣ ಕಾಣಿಸಿಕೊಂಡಿದೆ.
ಸದ್ಯ ಮಹಿಳೆ ಕೊನೆಯ ಹಂತದಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

























