ಡಿಸೆಂಬರ್ 3, 4, 5 ರಂದು ವಿವಿಧ ವೈಧಿಕ ಕಾರ್ಯಕ್ರಮ – ಪ್ರತಿಷ್ಠೆ
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈ ಬಂಟನಾಗಿ ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿ ಪುತ್ತೂರು,ಕುಕ್ಕೆ ಹಾಗೂ ಪಂಜದ ಭಕ್ತರ ಇಷ್ಟಾರ್ಥ ನೆರವೇರಿಸುವ ಕಾರಣಿಕದ ದೈವ ಕಾಚು ಕುಜುಂಬ ದೈವಸ್ಥಾನ ಇದೀಗ ಜೀರ್ಣೋದ್ಧಾರ ಗೊಳ್ಳುತ್ತಿದ್ದು ಪ್ರತಿಷ್ಠಾಪನೆಗೆ ಸಿದ್ದಗೊಳ್ಳುತ್ತಿದೆ.
ಕಾಚು ಕುಜುಂಬ ದೈವದ ಇತಿಹಾಸವೇ ರೋಚಕ: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುಪರ್ಧಿಯಲ್ಲಿ ಬರುವ ಕಾರ್ಣಿಕ ದೈವ ಬಲ್ನಾಡು ಶ್ರೀ ಉಳ್ಳಾಲ್ತಿಯ ಬಲಗೈ ಬಂಟನಾದ ಕಾಚು ಕುಜುಂಬ ದೈವಕ್ಕೆ ಪಂಜ ದೇಗುಲದಲ್ಲಿ ನಡೆಯುವ ಏಳು ದಿನಗಳ ಜಾತ್ರಾಮಹೋತ್ಸವ ನಡೆಯುವ ವಿಚಾರ ತಿಳಿದು ಪಂಜದ ಜಾತ್ರೆಗೆ ಹೋಗಲೇ ಬೇಕೆಂದು ನಿರ್ಧರಿಸಿದ ಕಾಚು ಕುಜುಂಬನು ಉಳ್ಳಾಲ್ತಿ ಯಲ್ಲಿ ಒಂದು ದಿನ ತೆರಳಲು ಅನುಮತಿ ಪಡೆದು ಜಾತ್ರೋತ್ಸವಕ್ಕೆ ತೆರಳುತ್ತಾನೆ ಆದರೆ ಬಂದವನೇ ಚಾತ್ರೆಯ ಆನಂದದಲ್ಲಿ ತೇಲಾಡುತ್ತಾ ಜಾತ್ರೆಯ 7 ದಿನವೂ ಪಂಜದಲ್ಲಿ ಉಳಿದುಕೊಂಡಿದ್ದು ಜಾತ್ರೆ ಕೊನೆಗೊಂಡ ನಂತರ ಅವಸರ ಅವಸರವಾಗಿ ಬಳ್ಳಾಡು ಉಳ್ಳಾಲ್ತಿ ಸಾನಿಧ್ಯಕ್ಕೆ ತೆರಳುತ್ತಾನೆ ಆದರೆ ಈತನು ಒಂದು ದಿನ ತೆರಳಲು ಅನುಮತಿ ಪಡೆದು 7 ದಿನಗಳನ್ನು ಮಾಡಿದ್ದನ್ನು ಕಂಡು ಉಳ್ಳಾಲ್ತಿ ಕಾಚು ಕುಜುಂಬನ ಮೇಲೆ ಕೋಪಗೊಂಡು ಗದರಿಸುತ್ತಾಳೆ ಇದರಿಂದ ಬೇಸರಗೊಂಡ ಕಾಚು ಕುಜುಂಬನು ಉಳ್ಳಾಲ್ತಿಯಲ್ಲಿ ಪರಿಪರಿಯಾಗಿ ಮನವಿ ಮಾಡುತ್ತಾ ಮುಂದೆ ನಾನು ಪಂಜ ದೇಗುಲದ ಬಳಿಯಲ್ಲಿ ನೆಲೆ ನಿಲ್ಲುತ್ತೇನೆ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಕುಕ್ಕೆಯಲ್ಲಿ ಕೂಡಾ ನೆಲೆನಿಂತು ಭಕ್ತಾದಿಗಳ ಧರ್ಮ ರಕ್ಷಣೆಯಲ್ಲಿ ಕೂಡಾ ತೊಡಗಿಸಿಕೊಳ್ಳುತ್ತೇನೆ.















ಎಂದು ಹೇಳಿ ಶ್ರೀ ಉಳ್ಳಾಲ್ತಿಯ ಆಶೀರ್ವಾದ ಪಡಕೊಂಡು ಪಂಜಕ್ಕೆ ಬಂದು ದೇಗುಲದ ದೇವರ ಅನುಮತಿಯೊಂದಿಗೆ ಶ್ರೀ ದೇವರ ಬಲಗೈ ಬಂಟನಾಗಿ ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡ ಎಂಬ ಇತಿಹಾಸವಿದೆ ಹಾಗೂ ಪಂಜ ಕಾಚು ಕುಜುಂಬ ದೈವವು ತುಂಬಾ ಕಾರಣೀಕ ದೈವ ಎಂದು ಹಿರಿಯರು ಹೇಳುತ್ತಾರೆ.ಪಂಜ ದೇವಸ್ಥಾನ ಕ್ಕೆ ರಾತ್ರಿ ಕಳವು ಮಾಡಲು ಬಂದ ಕಳ್ಳರನ್ನು ಓಡಿಸಿದ ಹಾಗೂ ಕಳವು ಮಾಡಿ ತೆಗೊಂದು ಹೋಗುವಾಗ ಅಡ್ಡ ನಿಂತು ಅಲ್ಲೇ ದೇವರ ಮೂರ್ತಿ ಹಾಗೂ ಹುಂಡಿ ಗಳನ್ನು ಬಿಟ್ಟು ಹೋದ ಘಟನೆ ಸುಮಾರು 35 ವರ್ಷಗಳ ಹಿಂದೆ ನಡೆದಿದೆ ಇದೀಗ ಇದೇ ಕಾಚು ಕುಜುಂಬನಿಗೆ ಪಂಬೆತ್ತಾಡಿ ಗ್ರಾಮದ ಗರಡಿ ಬೈಲು (ಮೂಲಸ್ಥಾನ )ಎಂಬಲ್ಲಿ ಬಂಟ ಮಲೆ ಯಿಂದ ಹರಿದು ಬರುವ ನಾಗತೀರ್ಥ ಹೊಳೆಯ ಬದಿಯಲ್ಲಿ ಮೂರು ಬದಿಯಲ್ಲಿ ಹೊಳೆ ಇರುವ ಪ್ರಕೃತಿ ರಮಣೀಯ ಸ್ಥಳದಲ್ಲಿ ಕೆಂಪು ಕಲ್ಲಿನ ಗೋಡೆ, ಮರ ಹಾಗೂ ಹಂಚಿನ ಮಾಡು ಮಾಡಿ ನಿರ್ಮಿಸುತ್ತಿರುವ ನೂತನ ದೈವಸ್ಥಾನ ವನ್ನು ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಯವರು ಡಿಸೆಂಬರ್ 3,4,5ರಂದು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದ್ದು ಇಲ್ಲಿನ ಐತಿಹ್ಯ ಹಾಗೂ ಪ್ರಕೃತಿಯು ಮಡಿಲಿನಲ್ಲಿ ಇರುವ ದೇಗುಲ ಮತ್ತು ದೈವಸ್ಥಾನವನ್ನು ಕಾಣುವುದೇ ಒಂದು ಪುಣ್ಯವಾಗಿದೆ.
ಪ್ರತಿ ಸಂಕ್ರಮಣ ದಿನದಂದು ನೂರಾರು ಭಕ್ತರು ಬಂದು ತಮ್ಮ ಮನಸ್ಸಿನ ನೋವುಗಳು ಹಾಗೂ ಇತರೆ ವಿಚಾರಗಳನ್ನು ದೈವದ ನಡೆಯಲ್ಲಿ ಪ್ರಾರ್ಥಿಸಿ ನಂತರದ ಸಂಕ್ರಮಣ ಪೂಜೆ ಸಂದರ್ಭದಲ್ಲಿ ತನ್ನ ಕೆಲಸ ಆಗಿದೆ ಎಂದು ದೈವದ ಸನ್ನಿದಾನಕ್ಕೆ ಬಂದು ಭಯ ಭಕ್ತಿ ಯಿಂದ ನಿಲ್ಲುವುದು ಕಂಡಾಗ ಸಂತೋಷವಾಗುತ್ತಿದ್ದು ಜೊತೆಗೆ ಭಯ,ಭಕ್ತಿಯು ಹೆಚ್ಚಾಗುತ್ತದೆ ಎಂಬುದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪರಮೇಶ್ವರ ಬಿಳಿಮಲೆ ಹೇಳುತ್ತಾರೆ.










