
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮಂಡ್ಯ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ವಿಭಾಗ ಮಂಡ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಾಗಮಂಗಲ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ನಾಗಮಂಗಲ ಇವರ ಸಹಯೋಗದಲ್ಲಿ 2025 ಸಾಲಿನ 14 ಮತ್ತು 17 ವಯೋಮಾನದ ಬಾಲಕರ ಮತ್ತು ಬಾಲಕಿಯರ ವಿಭಾಗದ ಯೋಗಾಸನ ಸ್ಪರ್ಧೆಯು ನ. 11 ರಂದು ಮಂಡ್ಯದಲ್ಲಿ ನಡೆಯಿತು.















ಈ ಸ್ಪರ್ಧೆಯಲ್ಲಿ
14 ವರ್ಷ ವಯೋಮಾನದ ಬಾಲಕಿಯರ ವಿಭಾಗದ ಆರ್ಟಿಸ್ಟಿಕ್ ಸಿಂಗಲ್ ಸೋಲೋ ವಿಭಾಗದಲ್ಲಿ ಹಾರ್ದಿಕ ಕೆರೆಕ್ಕೋಡಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆರ್ಟಿಸ್ಟಿಕ್ ಪೇರ್ ಹಾಗೂ ರಿದಮಿಕ್ ಪೇರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಈಕೆ ಕೃಷ್ಣಪ್ಪ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ. ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಶಿಕ್ಷಕರಾದ ಸಂತೋಷ್ ಮುಂಡಕಜೆ ಹಾಗೂ ಪ್ರಶ್ವಿಜಾ ಸಂತೋಷ್ ಮಾರ್ಗದರ್ಶನ ನೀಡಿರುತ್ತಾರೆ.










