ಕನಕಮಜಲು : ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕಿಳಿದ ಪಿಕಪ್

0

ಕನಕಮಜಲು ಗ್ರಾಮದ ಕದಿಕಡ್ಕ ಎಂಬಲ್ಲಿ ನ.12 ರಂದು ರಾತ್ರಿ‌12 ಗಂಟೆ ಸುಮಾರಿಗೆ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ತೋಟಕ್ಕಿಳಿದ ಘಟನೆ ವರದಿಯಾಗಿದೆ.

ಸುಳ್ಯದ ರಕ್ಷಿತ್ ಎಂಬವರು ಪುತ್ತೂರು ಕಡೆಯಿಂದ ಬರುತ್ತಿರುವಾಗ ಕದಿಕಡ್ಕ‌ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ‌ಕಂಬಕ್ಕೆ ಢಿಕ್ಕಿಯಾಯಿತು. ಬಳಿಕ ಪಕ್ಕದ ತೋಟಕ್ಕೆ ಇಳಿಯಿತು. ಪರಿಣಾಮ ರಕ್ಷಿತ್ ಹಾಗೂ ಇನ್ನೊಬ್ಬ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.