ಚೊಕ್ಕಾಡಿ: ಗರುಡ ಯುವಕ ಮಂಡಲ ವತಿಯಿಂದ ಚಿಕಿತ್ಸೆಗೆ ಧನಸಹಾಯ

0

ತೀವ್ರವಾದ ಬಡತನದಲ್ಲಿ ಇದ್ದರೂ ಗ್ರಾಮದ ಎಲ್ಲಾ ಧಾರ್ಮಿಕ, ಸಾಮಾಜಿಕ, ಕ್ರೀಡಾ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ತನ್ನದೇ ಆದ ಸೇವೆ ಮಾಡುತ್ತಿದ್ದಂತಹ
ಶ್ರೀಕಾಂತ್ ಬೊಳ್ಳೂರು (ಕಣಿಪ್ಪಿಲ)
ಇವರು ಒಂದು ತಿಂಗಳಿನಿಂದ ನರದ ಸಮಸ್ಯೆಯಿಂದ ತನ್ನ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡು ನಡೆದಾಡಲು ಆಗದ ಪರಿಸ್ಥಿತಿಯಲ್ಲಿ ಇದ್ದರು.
ಇವರು ಸುಳ್ಯದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಉನ್ನತ ದರ್ಜೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದರು.
ಬಡತನದಲ್ಲಿರುವ ಅವರಿಗೆ ಚಿಕಿತ್ಸೆಗೆ ಹೋಗಲು ಹಣದ ಸಮಸ್ಯೆಯಿಂದಾಗಿ ಮನೆಯಲ್ಲೇ ಇದ್ದರು. ಸಹೃದಯರ ಧನಸಹಾಯದ ಭರವಸೆಯ ನಂತರ ಎ. ಜೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಇವರಿಗೆ ಚೊಕ್ಕಾಡಿಯ ಗರುಡ ಯುವಕ ಮಂಡಲದ ವತಿಯಿಂದ ಊರವರ ಮತ್ತು ಹಿತೈಷಿ ಸಹೃದಯರ ಸಹಾಯ ಪಡೆದು ರೂ.26,283.00 ಹಣ ಸಂಗ್ರಹಿಸಿ ಶ್ರೀಕಾಂತ ರವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಗರುಡ ಯುವಕ ಮಂಡಲದ ಅಧ್ಯಕ್ಷ ಅರುಣ್ ಕುಮಾರ್ ಮುಂಡಾಜೆ, ಕಾರ್ಯದರ್ಶಿ ಯಕ್ಷಿತ್ ಬೊಳ್ಳೂರು ಮತ್ತು ಯುವಕ ಮಂಡಲದ ಪೂರ್ವಾಧ್ಯಕ್ಷರಾದ ಸತೀಶ್ ಪಿಲಿಕಜೆ ಉಪಸ್ಥಿತರಿದ್ದರು.