ಅಮರಮುಡ್ನೂರು : ಕಂದಡ್ಕ-ಮುಂಡಕಜೆಯಲ್ಲಿ ಪ್ರಯಾಣಿಕರ ಬಸ್ಸು ತಂಗುದಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

0

ಅಮರಮುಡ್ನೂರು ಗ್ರಾಮದ ಕಂದಡ್ಕ-ಮುಂಡಕಜೆ ಎಂಬಲ್ಲಿಪ.ಜಾತಿ-ಪಂ.ಪಂಗಡದ ಅನುದಾನ ರೂ.3 ಲಕ್ಷದಲ್ಲಿ ನೂತನ ಬಸ್ಸು ತಂಗುದಾಣ ನಿರ್ಮಾಣಕ್ಕೆ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಗುದ್ದಲಿಪೂಜೆಯನ್ನು ನೆರವೇರಿಸಿದರು.

ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ, ಪಂಚಾಯತ್ ಸದಸ್ಯರಾದ ಶ್ರೀಮತಿ ಪದ್ಮಪ್ರಿಯಾ ಶ್ರೀಮತಿ ತೇಜಾವತಿ, ಚೊಕ್ಕಾಡಿ ಪ್ರಾ.ಕೃ.ಪ ಸಂಘದ ಉಪಾಧ್ಯಕ್ಷ ಪ್ರವೀಣ್ ಎಸ್ ರಾವ್,ಮುಖಂಡರಾದ ಹರೀಶ್ ಕಂಜಿಪಿಲಿ, ದಿನೇಶ್ ದುಗ್ಗಲಡ್ಕ, ಶರತ್ ದೊಡ್ಡತೋಟ, ಬಾಲಸುಬ್ರಹ್ಮಣ್ಯಂ ಕೂಟೇಲು, ಶಿವಪ್ರಸಾದ್ ದುಗ್ಗಲಡ್ಕ, ಗುತ್ತಿಗೆದಾರ ಹರಿಪ್ರಸಾದ್ ಎಲಿಮಲೆ ಸ್ಥಳೀಯರು ಉಪಸ್ಥಿತರಿದ್ದರು. ಪ್ರವೀಣ್ ಎಸ್ ರಾವ್ ಕಾರ್ಯಕ್ರಮ ನಿರೂಪಿಸಿದರು.