
ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದ ಅಭಿವೃದ್ಧಿ ಕಾರ್ಯಗಳಿಗೆ ನ. 11 ರಂದು ಭೂಮಿ ಪೂಜೆ ಮೂಲಕ ಚಾಲನೆ ನೀಡಲಾಯಿತು.
ಭಜನಾ ಮಂದಿರದ ಹಳೆಯ ಭೋಜನ ಶಾಲೆ, ಅಡುಗೆ ಕೊಠಡಿ ಕೆಡವಿ ನೂತನ ಭೋಜನ ಶಾಲೆ ಹಾಗೂ ಮೇಲ್ಭಾಗದಲ್ಲಿ ಸಭಾಂಗಣ ಮಾಡುವ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿದಿನ ಶ್ರಮ ಸೇವೆಯ ಮೂಲಕ ಶ್ರಮದಾನ ನಡೆಯುತ್ತಿದೆ.















ಅಭಿವೃದ್ಧಿ ಕಾರ್ಯಕ್ಕೆ ಆರಂಭಕ್ಕೆ ಮುನ್ನ ನ. 9ರಂದು ಬೆಳಗ್ಗೆ ಮಂದಿರದಲ್ಲಿ ನಾಗತಂಬಿಲಿ ನಡೆಯಿತು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಪದಾಧಿಕಾರಿಗಳು, ಸರ್ವ ಸದಸ್ಯರು, ಊರಿನವರು ಉಪಸ್ಥಿತರಿದ್ದರು.










