
ಇತ್ತೀಚಿಗೆ ನಿಧನರಾದ ಸುಳ್ಯ ಪಿ ಎಲ್ ಡಿ ಬ್ಯಾಂಕಿನ ನಿವೃತ್ತ ಉದ್ಯೋಗಿ, ದಿ. ಆನಂದ ಗೌಡ ಜತ್ತಿಲರವರಿಗೆ ನುಡಿನಮನ ಹಾಗೂ ವೈಕುಂಠ ಸಮಾರಾಧನೆ ಕಾರ್ಯಕ್ರಮ ನ.13ರಂದು ಸುಳ್ಯದ ಅಂಬೆಟಡ್ಕದ ಕನ್ನಡ ಭವನದಲ್ಲಿ ನಡೆಯಿತು.
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರವರು ಮೃತರ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು.















ದಿ.ಆನಂದ ಗೌಡರ ಮೊಮ್ಮಗಳು ಕು.ಸಾಯಿನಕ್ಷತ್ರ ಎಂ.ಆರ್ ಯಕ್ಷಗಾನ ಪದದ ಮೂಲಕ ತನ್ನ ತಾತನಿಗೆ ನುಡಿ ನಮನ ಸಲ್ಲಿಸಿದಳು.
ಈ ಸಂದರ್ಭದಲ್ಲಿ ಶ್ರೀಮತಿ ಭಾನುಮತಿ ಜೆ, ಶ್ರೀಮತಿ ಚೈತ್ರ, ಚೇತನ್ ಜೆ, ರಮೇಶ್ ಎಂ.ವಿ, ಶ್ರೀಮತಿ ಭವ್ಯ, ಮೊಮ್ಮಕ್ಕಳು ಬಂಧುಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.










