ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ 14 ಶಾಲೆಗಳ ವಿದ್ಯಾರ್ಥಿಗಳು

2025-26 ನೇ ಬೆಳ್ಳಾರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಹಿದಾಯ ಪಬ್ಲಿಕ್ ಸ್ಕೂಲ್, ಬೆಳ್ಳಾರೆಯಲ್ಲಿ ಬಹಳ ಅದ್ದೂರಿಯಿಂದ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿದಾಯ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷರಾದ ಜನಾಬ್ ಯು ಎಚ್ ಅಬೂಬಕರ್ ರವರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಬೆಳ್ಳಾರೆ ಕ್ಲಸ್ಟರ್ ಸಿ ಆರ್ ಪಿ ಅನುರಾಧ ರವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಹಿದಾಯ ಪಬ್ಲಿಕ್ ಸ್ಕೂಲ್, ಬೆಳ್ಳಾಾರೆಯ ಮುಖ್ಯ ಶಿಕ್ಷಕಿಯಾದ ಸುನೈನಾ ಬಿ ಸ್ವಾಗತಿಸಿದರು.
















ಮುಖ್ಯ ಅತಿಥಿಯಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ಭಾಗವಹಿಸಿದ್ದರು. ಶಾಲೆಯ ಸಂಚಾಲಕರಾದ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ,ಕ್ಷೇತ್ರ ಶಿಕ್ಷಣ ಅಧಿಕಾರಿಗಲಾದ ಶೀತಲ್, ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ, ಕೆ ಪಿ ಎಸ್ ಬೆಳ್ಳಾರೆಯ ಮುಖ್ಯ ಶಿಕ್ಷಕ ಮಾಯಿಲಪ್ಪ ಹಿದಾಯ ಕಾರ್ಯದರ್ಶಿ ಯು ಪಿ ಬಶೀರ್ , ಅಜರುದ್ದೀನ್ , ಬಶೀರ್ ಕಲ್ಲಪ್ಪನೆ,ನಾಸಿರ್ ಬೆಳ್ಳಾರೆ, ಮತ್ತು ಆರಿಫ್ ಬೆಳ್ಳಾರೆ ಯವರು ಉಪಸ್ಥಿತರಿದ್ದರು.

ಸುಮಾರು 14 ಶಾಲೆಗಳ ಸ್ಪರ್ಧಾರ್ಥಿಗಳು, ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು. ಕೆ ಪಿ ಎಸ್ ಬೆಳ್ಳಾರೆ ಹಿರಿಯರ ವಿಭಾಗದಲ್ಲಿ ಮತ್ತು ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರೆ
ಹಿದಾಯ ಪಬ್ಲಿಕ್ ಸ್ಕೂಲ್, ಬೆಳ್ಳಾರೆ ಹಿರಿಯ ಮತ್ತು ಕಿರಿಯ ವಿಭಾಗಗಳ ಸ್ಪರ್ಧೆಗಳಲ್ಲಿ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಅಶ್ವಿನಿ ಪಿ.ವಂದಿಸಿದರು.










