ಬೆಳ್ಳಾರೆ : ಮಾಸ್ತಿಕಟ್ಟೆ ತಡಗಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಅಂಗನವಾಡಿ ಕೇಂದ್ರ ಮಾಸ್ತಿಕಟ್ಟೆ ತಡೆಗಜೆಯಲ್ಲಿ ಮಕ್ಕಳ ದಿನಾಚರಣೆಯನ್ನು ನ.14 ರಂದು ಆಚರಿಸಲಾಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಶೈನಿಕಿರಣ್ ವಹಿಸಿದ್ದರು. ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಬೆಳ್ಳಾರೆ ಉಪಾಧ್ಯಕ್ಷರಾದ ಶ್ರೀಮತಿ ವೀಣಾ ಮೂಡಾಯಿತೋಟ ರವರು ನೆರವೇರಿಸಿದರು.


ಅತಿಥಿಗಳಾಗಿ ಶ್ರೀಮತಿ ಉಷಾ ಪ್ರಸಾದ್ ಅಂಗನವಾಡಿ ಮೇಲ್ವಿಚಾರಕರು ಬೆಳ್ಳಾರೆ ವಲಯ, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರೀ ಬೆಳ್ಳಾರೆ,ಆಶಾ ಕಾರ್ಯಕರ್ತೆ ಶ್ರೀಮತಿ ಗೀತಾ, ಮಾಸ್ತಿಕಟ್ಟೆ ಸ್ತ್ರೀ ಶಕ್ತಿ ಅಧ್ಯಕ್ಷೆ ಶ್ರೀಮತಿ ಹೊನ್ನಮ್ಮ ಉಪಸ್ಥಿತರಿದ್ದರು.


ಅಂಗನವಾಡಿ ಕೇಂದ್ರದ ಮಕ್ಕಳಿಗೆ ಚದ್ಮವೇಷ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಬಹುಮಾನದ ಪ್ರಾಯೋಜಕತ್ವವನ್ನು ಪ್ರಿಯಾಂಕ ರೋಹಿತಾಶ್ವ ರೈ ಉಮಿಕ್ಕಳ ವಹಿಸಿದ್ದರು.
ಶಾಲಾ ಪೂರ್ವ ಕಿಟ್ ಉದ್ಘಾಟನೆ ಮಾಡಿ ವಿತರಿಸಲಾಯಿತು.


ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಅಂಗನವಾಡಿ ಕೇಂದ್ರದ ಫಲಾನುಭವಿಗಳ ಪೋಷಕರ ಪರವಾಗಿ ಅಂಗನವಾಡಿ ಕೇಂದ್ರಕ್ಕೆ ಇನ್ವರ್ಟರ್ ಕೊಡುಗೆ ನೀಡಿರುತ್ತಾರೆ. ಅಂಗನವಾಡಿ ಕೇಂದ್ರದ ಅಂಗಳಕ್ಕೆ ಗ್ರಾಮ ಪಂಚಾಯತ್ ಬೆಳ್ಳಾರೆ ವತಿಯಿಂದ ಇಂಟರ್ಲಾಕ್ ಅಳವಡಿಕೆ ಮಾಡಿರುತ್ತಾರೆ.
ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಅಂಗನವಾಡಿ ಸಹಾಯಕಿ ಗುಲಾಬಿ, ಸ್ತ್ರೀ ಶಕ್ತಿ ಸದಸ್ಯರು ಪೋಷಕರು ಅಂಗನವಾಡಿ ಪುಟಾಣಿಗಳು ಭಾಗವಹಿಸಿದ್ದರು.