ಜಯನಗರ ಹಾಗೂ ಹಳೆಗೇಟು ಪರಿಸರಕ್ಕೆ ತಹಶೀಲ್ದಾರರು ಭೇಟಿ, ಪರಿಶೀಲನೆ

0

ಸುಳ್ಯ ನಗರಾಡಳಿತದ ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ತಹಶೀಲ್ದಾರ್ ಶ್ರೀಮತಿ ಮಂಜುಳಾ ರವರು ನವಂಬರ್ 14ರಂದು ಜಯನಗರ ಹಾಗೂ ಹಳೆಗೇಟು ವಾರ್ಡಿಗೆ ಭೇಟಿ ನೀಡಿ ಸ್ಥಳೀಯ ಪರಿಸರ ವೀಕ್ಷಣೆ ನಡೆಸಿದರು.

ಜಯನಗರ ಆಶ್ರಯ ಕಾಲೋನಿ, ಹಿಂದೂ ರುದ್ರ ಭೂಮಿ, ತೋಟಗಾರಿಕೆ ಫಾರ್ಮ್, ಜಯನಗರ ನೂತನ ನೀರಿನ ಟ್ಯಾಂಕ್,ಹಾಗೂ ಸ್ಥಳೀಯ ರಸ್ತೆಗಳ ಬಗ್ಗೆ ವೀಕ್ಷಣೆ ನಡೆಸಿದ್ದಾರೆ.

ಜಯನಗರ ರಸ್ತೆಯ ಅವ್ಯವಸ್ಥೆಯ ಬಗ್ಗೆ ಬೇಸರಗೊಂಡಿರುವ ಸ್ಥಳೀಯ ಜನತೆಗೆ ತಹಶೀಲ್ದಾರರ ಭೇಟಿ ಅಲ್ಪ ಮಟ್ಟಿಗೆ ಸಮಾಧಾನ ನೀಡಿದೆ. ಅದೇ ರೀತಿ ರಸ್ತೆ ದುರಸ್ಥಿ ಕಾರ್ಯ ಶೀಘ್ರವಾಗಿ ಆಗಬೇಕೆಂದು ಸ್ಥಳೀಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಗುದ್ದಲಿ ಪೂಜೆ ನಡೆದು ತಿಂಗಳುಗಳೇ ಕಳೆಯಿತು.ಆದರೂ ಕೂಡ ರಸ್ತೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಹಾಗೂ ಸ್ಥಳೀಯ ಆಟೋ ಚಾಲಕರುಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸುಳ್ಯ ಕಂದಾಯ ನಿರೀಕ್ಷಕ ಅವಿನ್ ರಂಗತಮಲೆ, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.