ಕದಿಕಡ್ಕ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಸಾಮೂಹಿಕ ಹುಟ್ಟುಹಬ್ಬ

0

ಜಾಲ್ಸೂರು ಗ್ರಾಮದ ಕದಿಕಡ್ಕ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಸಾಮೂಹಿಕ ಹುಟ್ಟುಹಬ್ಬ ನ.14 ರಂದು ಆಚರಿಸಲಾಯಿತು.

ಸಭಾಧ್ಯಕ್ಷತೆಯನ್ನು ಹಿರಿಯ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಾಗಮ್ಮ ಬಾಲಾಜೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಂಗಾರು ತರವಾಡು ಮನೆಯ ಮೊಕ್ತೇಸರ, ನಿವೃತ್ತ ಕೃಷಿ ಅಧಿಕಾರಿ ಮೋಹನ್‌ ನಂಗಾರು, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸುಮಿತ್ರ, ಸದಸ್ಯ ಧನರಾಜ್‌ ಕೆ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗಿರಿಜರವರು ಸ್ವಾಗತಿಸಿ ವಂದಿಸಿದರು. ಅಂಗನವಾಡಿ ಸಹಾಯಕಿ ಶ್ರೀಮತಿ ಜಯಂತಿ, ಶ್ರೀಮತಿ ರೀನಾ ಹಾಗೂ ಶ್ರೀಮತಿ ಸವಿತಾ ಸಹಕರಿಸಿದರು. ಶೇಖರ್‌ ಕಾಳಮನೆ ನಿರೂಪಿಸಿದರು. ಅಂಗನವಾಡಿ ಮಕ್ಕಳು ಪ್ರಾರ್ಥಿಸಿದರು. ಮಕ್ಕಳ ಪೋಷಕರು, ಹಿರಿಯರು ಉಪಸ್ಥಿತರಿದ್ದರು.