ಸಂಪಾಜೆ ದಂಡೆಕಜೆಯಲ್ಲಿ ಶ್ರೀ ಆದಿ ನಾಗಬ್ರಹ್ಮ ಮುಗೇರ್ಕಳ ಕೊರಗ ತನಿಯ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

0


ಸಂಪಾಜೆ ಕಲ್ಲುಗುಂಡಿಯ ದಂಡೆಕಜೆಯಲ್ಲಿ ಶ್ರೀ ಆದಿ ನಾಗಬ್ರಹ್ಮ ಮುಗೇರ್ಕಳ ಕೊರಗ ದೈವದ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ನ. ೧೨ ಮತ್ತು ೧೩ರಂದು ನಡೆಯಿತು.


ನ. ೧೨ರಂದು ಸಂಜೆ ತಂತ್ರಿವರ್ಯರ ಆಗಮನ, ಅಘೋರ ರುದ್ರ ಹೋಮ, ನ. ೧೩ರಂದು ಬೆಳಿಗ್ಗೆ ವೃಶ್ಚಿಕ ಲಗ್ನದ ಶುಭಮುಹೂರ್ತದಲ್ಲಿ ತಂತ್ರಿವರ್ಯ, ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳು ಪೆರಾಜೆ ಇವರ ಮಾರ್ಗದರ್ಶನದಲ್ಲಿ ಅನುಜ್ಞಾಕಲಶ ಮತ್ತು ಬಾಲಾಲಯ ಪ್ರತಿಷ್ಠೆ ನಡೆಯಿತು.


ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ ಅಡ್ಕಾರು, ಅಧ್ಯಕ್ಷ ಕುಸುಮಾಧರ ದಂಡೆಕಜೆ, ಉಪಾಧ್ಯಕ್ಷ ರಕ್ಷಿತ್ ದಂಡೆಕಜೆ, ಚುಕ್ರ ದಂಡೆಕಜೆ, ಕಾರ್ಯದರ್ಶಿ ವೆಂಕಪ್ಪ ದಂಡೆಕಜೆ, ವಣಿಯಾರು ದಂಡೆಕಜೆ, ಜೊತೆಕಾರ್ಯದರ್ಶಿ ರಕ್ಷಿತ್ ಪೇರಾಲು, ರೋಹಿತ್ ದಂಡೆಕಜೆ, ಖಜಾಂಜಿ ಹೊನ್ನಪ್ಪ ಆಚಾರ್ಯ ದಂಡೆಕಜೆ, ಕಾರ್ಯಕಾರಿ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.