
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದಿಂದ ನಗರದ ಕೊಡಿಯಾಲಬೈಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಪರಿಸರ ಜಾಗೃತಿಗಾಗಿ ” ನಮ್ಮ ಶಾಲೆ- ನಮ್ಮ ಪರಿಸರ ” ಮಕ್ಕಳ ಚಿತ್ರಕಲಾ ಸ್ಪರ್ಧೆ ಮೂಲಕ ಆಚರಿಸಲಾಯಿತು.
















ಶಾಲೆಯ ಒಂದನೇ ತರಗತಿಯಿಂದ ಐದನೇ ತರಗತಿ ಯ 24 ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಮಕ್ಕಳು ತಮ್ಮ ಕುಂಚ ಮತ್ತು ಬಣ್ಣಗಳ ಮೂಲಕ ಶಾಲೆಯ ಹಸಿರು ಆವರಣ, ಸುತ್ತಮುತ್ತಲಿನ ಪರಿಸರ,ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆ ಮಹತ್ವವನ್ನು ಸಾರುವ ಅದ್ಭುತ ಚಿತ್ರಗಳನ್ನು ಬಿಡಿಸಿದರು.

ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಪರಿಸರದ ಬಗ್ಗೆ ಅವರಿಗೆ ಇರುವ ಕಾಳಜಿ ಪ್ರತಿಯೊಂದು ಚಿತ್ರದಲ್ಲಿ ಎದ್ದು ಕಾಣುತ್ತಿತ್ತು. ಎಸ್ ಕೆ ಪಿ ಎ ಸುಳ್ಯ ವಲಯದ ಅಧ್ಯಕ್ಷ ಶಶಿ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಬೇಬಿ, ಅಧ್ಯಾಪಿಕೆರಾದ ಸವಿತಾ ಸುಬ್ಬಯ್ಯ, ವಾರ್ಡ್ ನ ಸದಸ್ಯೆ ಶ್ರೀಮತಿ ಮಮತಾ
ಕುತ್ಪಾಜೆ, ಗೋಪಾಲ್ ಸ್ಟುಡಿಯೋ, ಮಾಧ್ಯಮ ಪ್ರತಿನಿಧಿ ಹರೀಶ್ ರಾವ್, ಕೋಶಾಧಿಕಾರಿ ವಸಂತಿ ಹರೀಶ್ ರಾವ್, ಪರಂ ಸ್ಟುಡಿಯೋ, ಜೊತೆ ಕಾರ್ಯದರ್ಶಿ ಅವಿನ್ ಬೆಟ್ಟಂಪಾಡಿ, ಗಿರೀಶ್, ಶಿವಪ್ರಸಾದ್ ರೈ, ರಮೇಶ್, ಶುಭಕರ್, ನವೀನ್, ಕಿರಣ್, ರಾಕೇಶ್ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಶಾಲೆಯ ಪ್ರತಿ ಮಕ್ಕಳಿಗೂ ಉಡುಗೊರೆ ಹಾಗು ತಿಂಡಿಯನ್ನು ಅಸೋಸಿಯೇಷನ್ ವತಿಯಿಂದ ವಿತರಿಸಲಾಯಿತು.










