
ಮರಾಟಿ ಸಮಾಜ ಸೇವಾ ಸಂಘ ಸುಳ್ಯ ಇದರ ವತಿಯಿಂದ ಮರಾಟಿ ಮಹಿಳಾ ವೇದಿಕೆ ಮತ್ತು ಮರಾಟಿ ಯುವ ವೇದಿಕೆಯ ಸಹಕಾರದೊಂದಿಗೆ ಸಮಾಜದ ಕಲ್ಯಾಣಕೋಸ್ಕರ ಗಣಪತಿ ಹವನ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆ ನಾಳೆ(ನ.16) ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಲಿದೆ.















ಬೆಳಿಗ್ಗೆ 8 ರಿಂದ ಗಣಪತಿ ಹವನ ಬಳಿಕ ಸತ್ಯನಾರಾಯಣ ದೇವರ ಪೂಜೆ ಆರಂಭಗೊಂಡು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಹಾಗೂ ಡಿ.7 ರಂದು ನಡೆಯಲಿರುವ ಮರಾಟಿಗರ ಗೋಂದೋಳು ಪೂಜೆ ಹಿನ್ನೆಲೆ, ಆಚರಣೆಯ ವಿಧಿವಿಧಾನಗಳು, ಇತರ ಪ್ರಮುಖ ಆಚರಣೆಗಳು ಪುಸ್ತಕ ಬಿಡುಗಡೆಯ ಆಮಂತ್ರಣ ಪತ್ರ ಬಿಡುಗಡೆ ಗೊಳ್ಳಲಿದೆ.ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ









