ಕೆ.ವಿ.ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಮತ್ತು ಮಕ್ಕಳ ದಿನಾಚರಣೆಯನ್ನು ನ. 14 ರಂದು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಶುಭ ಹಾರೈಸಿದರು.

ಶಾಲೆಯ ಪ್ರಾಂಶುಪಾಲ ಅರುಣ್ ಕುಮಾರ್ ಮತ್ತು ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ಕನ್ನಡ ಶಿಕ್ಷಕಿಯರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.















ಕಾರ್ಯಕ್ರಮದಲ್ಲಿ ಕೆವಿಜಿಅಮರ ಜ್ಯೋತಿ ಪಿ ಯು ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಕು. ರೀತಿ ಕನ್ನಡದ ಮಹತ್ವ, ಸಂಸ್ಕೃತಿ ಹಾಗೂ ಭಾಷಾ ಪರಂಪರೆಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕನ್ನಡದ ಪರಂಪರೆ, ಕಲೆ ಮತ್ತು ನಾಡ ಪ್ರೇಮದ ಒಕ್ಕಣಗಳನ್ನು ಪ್ರದರ್ಶಿಸಿದರು. ಹತ್ತನೇ ತರಗತಿಯ ಮನ್ವಿತ ಸಿ ಎಚ್ ಮತ್ತು ಸೋನಾ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು. ಕು. ಶಮ್ಯಾ ವಂದಿಸಿದರು. ಕಾರ್ಯಕ್ರಮದ ವಿಶೇಷತೆಯನ್ನು 10ನೇ ತರಗತಿಯ ದೀಕ್ಷಿತ್ ಮತ್ತು 5ನೇ ತರಗತಿಯ ಆದ್ಯರವರು ವಿವರಿಸಿದರು. ಬಳಿಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಜವಾಹರ್ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಕ್ಕಳ ದಿನದ ಮಹತ್ವವನ್ನು ಸ್ಮರಿಸಲಾಯಿತು. ಬಳಿಕ ಶಾಲೆಯ ಪ್ರಾಂಶುಪಾಲರು “ನೆಹರು ಅವರ ಮಕ್ಕಳ ಮೇಲಿನ ಪ್ರೀತಿ, ಮಕ್ಕಳ ದಿನದ ತತ್ವ ಮತ್ತು ಶಿಕ್ಷಣದ ಸಾರ”ವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರು ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ಶೋಭಾರಾಜ್ ಕಲ್ಲಾಜೆ ಮತ್ತು ಶ್ರೀಮತಿ ಸೌಮ್ಯ ಕೆ ನಿರೂಪಿಸಿದರು. ಶ್ರೀಮತಿ ಸುನಿತಾ ವಂದಿಸಿದರು. ಕಾರ್ಯಕ್ರಮದ ವಿಶೇಷತೆಯ ಕುರಿತು ಶ್ರೀಮತಿ ಧನ್ಯ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









