ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತೆ ಹಾಗೂ ಚಂಪಾಷಷ್ಠಿ ಮಹೋತ್ಸವ ಮುಂಜಾಗ್ರತಾ ಕ್ರಮಗಳ ತುರ್ತು ಸಭೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸುಬ್ರಹ್ಮಣ್ಯ ದೇವಳದ ಪರಿಸರ ರಥ ಬೀದಿ, ಸ್ನಾನಘಟ್ಟ, ಮುಖ್ಯರಸ್ತೆ, ಇಂಜಾಡಿ ಪ್ರದೇಶ, ನೂಚಿಲ ಪ್ರದೇಶ, ಸವಾರಿ ಮಂಟಪ, ದೇವರಗದ್ದೆ , ಆದಿ ಸುಬ್ರಹ್ಮಣ್ಯ, ಬಿಲದ್ವಾರ ಮುಂತಾದ ಪ್ರದೇಶಗಳಲ್ಲಿ ಸ್ವಚ್ಛತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನ. 13 ರಂದು ತುರ್ತು ಸಭೆ ಜರಗಿಸಲಾಯಿತು.


ಸಭೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ, ಉಪಾಧ್ಯಕ್ಷ ರಾಜೇಶ್ ಎನ್ಎಸ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ ನೆಕ್ರಾಜೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಸಪಲ್ಯ, ಆರಕ್ಷಕ ಸಹಾಯಕ ಉಪ ನಿರೀಕ್ಷಕ ಸೀತಾರಾಮ ಗೌಡ, ಲೋಕೋಪಯೋಗಿ ಇಂಜಿನಿಯರ್ ಜನಾರ್ಧನ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಭೆಯಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಬಗ್ಗೆ, ಆರೋಗ್ಯ ಸುರಕ್ಷತೆ ಬಗ್ಗೆ,ಜಾನುವಾರು ಹಾಗೂ ಬೀದಿ ನಾಯಿಗಳ ಉಪಟಳದ ಬಗ್ಗೆ, ಮಧ್ಯಪಾನ, ಧೂಮಪಾನ ನಿಷೇಧ ಬಗ್ಗೆ,ಜುಜಾಟ ನಿಷೇಧ ಬಗ್ಗೆ, ಕಸ ವಿಲೇವಾರಿ ಬಗ್ಗೆ,ಜಾತ್ರೆಗೆ ಬರುವ ಭಕ್ತಾದಿಗಳ ಸುರಕ್ಷತೆ ಬಗ್ಗೆ,ಅಗತ್ಯ ತಾತ್ಕಾಲಿಕ ಶೌಚಾಲಯಗಳು, ಬೀದಿ ದೀಪಗಳುಗಳ ಅಳವಡಿಕೆ ಹಾಗೂ ರಿಪೇರಿ ಬಗ್ಗೆ, ರಸ್ತೆ ರಿಪೇರಿಗಳ ಬಗ್ಗೆ, ಎಲ್ಲೆಡೆ ಬೆಳೆದು ನಿಂತ ಹುಲುಸಾದ ಹುಲ್ಲುಗಳನ್ನು ಕಳೆಗಳನ್ನು ತೆಗೆದು ಸ್ವಚ್ಛಗೊಳಿಸುವ ಬಗ್ಗೆ, ಜಾತ್ರೆಯಲ್ಲಿ ಸಂತೆ ವ್ಯಾಪಾರದಲ್ಲಿ ಆಗುತ್ತಿರುವ ತ್ಯಾಜ್ಯ ಹಾಗೂ ಕಸ ವಿಲೇವಾರಿ ಬಗ್ಗೆ, ಚರ್ಚೆ ನಡೆಯಿತು. ಕೊನೆಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ, ಹಾಗೂ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಳ ಮತ್ತು ಪೊಲೀಸ್ ಇಲಾಖೆಯವರು ಜಂಟಿಯಾಗಿ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಿ ಜಾತ್ರೋತ್ಸವದಲ್ಲಿ ಉತ್ಸವ ಹಾಗೂ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಏನೂ ತೊಂದ್ರೆ ಆಗದಂತೆ ನೋಡಿಕೊಳ್ಳುವುದೆಂದು ತೀರ್ಮಾನಿಸಲಾಯಿತು. ಅಲ್ಲದೆ ಜಾತ್ರೆಗೆ ಬರುವ ಭಕ್ತರ ಸುರಕ್ಷತೆಗೆ ಹೆಚ್ಚು ಒತ್ತುಕೊಟ್ಟು ಸುಗಮವಾಗಿ ಜಾತ್ರೆ ನಡೆಯುವಂತೆ ಸಂಘ-ಸಂಸ್ಥೆಗಳ ಸಹಕಾರವನ್ನು ಕೋರುವುದು ಹಾಗೂ ಎಲ್ಲರೂ ಒಟ್ಟಿಗೆ ಕಾರ್ಯನಿರ್ವಹಿಸುವುದೆಂದು ತೀರ್ಮಾನಿಸಲಾಯಿತು.


ಚರ್ಚೆಯಲ್ಲಿ ರವಿ ಕಕ್ಕೆಪದವು, ಶಿವರಾಮ ರೈ, ಶಿವಕುಮಾರ್ ಕಾಮತ್,ಪವನ್ ಎಂ ಡಿ, ಕೆ ನಾರಾಯಣ ಅಗ್ರಹಾರ ದಿಲೀಪ್ ಉಪ್ಪಳಿಕೆ ,ವಿಶ್ವನಾಥ ನಡುತೋಟ, ಚಂದ್ರಶೇಖರ ನಾಯರ್,ಶ್ರೀಕುಮಾರ್ ಬಿಲದ್ವಾರ, ಶಿವರಾಮ ನೆಕ್ರಾಜೆ,ಭಾರತಿ ದಿನೇಶ್, ಪಶುವಿದ್ಯಾಧಿಕಾರಿಗಳು, ಅರಣ್ಯಾಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಶ್ರೀದೇವಳದ ಅಧಿಕಾರಿಗಳು, ಶ್ರೀಮಠದ ಅಧಿಕಾರಿಗಳು,ಪಂಚಾಯತ್ ಸದಸ್ಯರು, ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಸ್ವಾಗತಿಸಿ, ಕಾರ್ಯದರ್ಶಿ ಮೋನಪ್ಪ ಧನ್ಯವಾದ ಸಮರ್ಪಿಸಿದರು.