ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಪಿ. ಸಿ. ಜಯರಾಮ ರವರಿಗೆ ಮಡಪ್ಪಾಡಿ ಸೊಸೈಟಿ ವತಿಯಿಂದ ಸ್ವಾಗತ ಸನ್ಮಾನ

0

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಪಿ. ಸಿ. ಜಯರಾಮ ರವರಿಗೆ ಮಡಪ್ಪಾಡಿ ಸೊಸೈಟಿ ವತಿಯಿಂದ ಸ್ವಾಗತ ಸನ್ಮಾನ ಇಂದು ನಡೆಯಿತು.

ಸೊಸೈಟಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡುಮತ್ತು ಉಪಾಧ್ಯಕ್ಷ ಸಚಿನ್ ಬಳ್ಳಡ್ಕರವರು ಸಹಕಾರಿ ಶಾಲು ಹಾಕಿ ಸ್ವಾಗತಿಸಿದರು. ಬಳಿಕ ಪಿ. ಸಿ. ಜಯರಾಮ ರವರನ್ನು ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ, ವಲಳಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಇದರ ಸದಸ್ಯ ಸೋಮಶೇಖರ ಕೇವಳ, ಮಡ ಪ್ಪಾಡಿ ಸೊಸೈಟಿ ಮಾಜಿ ನಿರ್ದೇಶಕ ಜಯರಾಮ ಹಾಡಿಕಲ್ಲು, ನಿವೃತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧರ್ಮಪಾಲ ತಳೂರು ಸೇರಿದಂತೆ ಸೊಸೈಟಿ ನಿರ್ದೇಶಕರು, ಊರವರು, ಸಿಬ್ಬಂದಿಗಳು ಉಪಸ್ಥಿತರಿದ್ದರು.