ಡಾಮರು ಎದ್ದು ಹೋಗಿ ಜಲ್ಲಿ ಕಲ್ಲಿನಲ್ಲಿ ವಾಹನ ಸವಾರರ ಪರದಾಟ
ಪಂಜಿಗಾರಿನಿಂದ ಕೊಡಿಯಾಲ ಹೋಗುವ ರಸ್ತೆ ಹೊಂಡ ಗುಂಡಿಗಳಿಂದ ತೀರಾ ಹದಗೆಟ್ಟಿದ್ದು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ಕಲ್ಲಗದ್ದೆಯಿಂದ ಕೊಡಿಯಾಲ ಹೋಗುವ ರಸ್ತೆ ತೀವ್ರ ಹೊಂಡ ಗುಂಡಿಗಳಿಂದ ಕೂಡಿದೆ.
















ವಾಹನ ಸವಾರರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗಿದ್ದು ರಸ್ತೆಯನ್ನು ಶೀಘ್ರವಾಗಿ ದುರಸ್ಥಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯತ್ ಸಮೀಪದ ತಿರುವಿನಲ್ಲಿ ಡಾಮರು ಎದ್ದು ಹೋಗಿ ಜಲ್ಲಿಕಲ್ಲುಗಳು ರಸ್ತೆಯಿಡೀ ಹರಡಿದೆ. ಇದರಿಂದ ದ್ವಿಚಕ್ರ ವಾಹನದವರಿಗೆ ಚಾಲನೆ ಮಾಡುಲು ಬಹಳ ಕಷ್ಟವಾಗುತ್ತಿದ್ದು ಕೆಲವರು ಸ್ಕಿಡ್ಡಾಗಿ ಬಿದ್ದು ಗಾಯಗೊಂಡ ಘಟನೆಯೂ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.











