ಮರ್ಕಂಜ ಗ್ರಾಮದ ತೇರ್ಥಮಜಲು ಅಂಗನವಾಡಿ ಕೇಂದ್ರದಲ್ಲಿ ಎಲ್. ಕೆ. ಜಿ., ಯು. ಕೆ. ಜಿ. ಪ್ರಾರಂಭ ಮತ್ತು ಮಕ್ಕಳ ದಿನಾಚರಣೆ ಹಾಗೂ ರೋಟರಿ ಕ್ಲಬ್ ಸುಳ್ಯ ಇವರ ಸಹಕಾರದಲ್ಲಿ ನಿರ್ಮಿಸಿದ ಜಾರುಬಂಡಿಯ ಉದ್ಘಾಟನೆ ಸಮಾರಂಭವು ನ.14ರಂದು ನಡೆಯಿತು.

ಸುಳ್ಯ ಅಟಲ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಕಂಜಿಪಿಲಿ ಉದ್ಘಾಟಿಸಿ ಶುಭ ಹಾರೈಸಿದರು. ಮರ್ಕಂಜ ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಗೀತಾ ಹೊಸೊಳಿಕೆ ಸಭಾಧ್ಯಕ್ಷತೆ ವಹಿಸಿದ್ದರು.















ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ II ರಾಮಮೋಹನ್ ಕೆ. ಯನ್ ಮತ್ತು ಕಾರ್ಯದರ್ಶಿ ಭಾಸ್ಕರ್ ನಾಯರ್ ಹಾಗೂ ಮರ್ಕಂಜ ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಚೆನ್ನಕೇಶನ ದೋಳ, ಮರ್ಕಂಜ ಗ್ರಾ.ಪಂ.ಸದಸ್ಯೆ ಶ್ರೀಮತಿ ಪವಿತ್ರ ಗುಂಡಿ ಹಾಗೂ ಆರಂತೋಡು ವಲಯದ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ ಪಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಿವೃತ್ತ ಅಂ. ಕಾರ್ಯಕರ್ತೆ ಶ್ರೀಮತಿ ಹೊನ್ನಮ್ಮ ಕೊಚ್ಚಿ ಮತ್ತು ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೋಷಕರು ಊರವರು ಪಾಲ್ಗೊಂಡಿದ್ದರು. ಮಕ್ಕಳಿಗೆ ಆಟೋಟ ನಡೆಸಿ ಬಹುಮಾನ ವಿತರಿಸಲಾಯಿತು. ಶ್ರೀಮತಿ ಅನಿತಾ ಕಂಜಿಪಿಲಿ ಸ್ವಾಗತಿಸಿದರು. ಶ್ರೀಮತಿ ಲತಾ. ಕೆ. ಎನ್. ವಂದಿಸಿದರು. ಷಣ್ಮುಖ ಸೂಟೆಗದ್ದೆಯವರು ಕಾರ್ಯಕ್ರಮ ನಿರೂಪಿಸಿದರು.










