ಕಂದ್ರಪ್ಪಾಡಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಾಲಾ ಶತಮಾನೋತ್ಸವದ ಶತಯಾನ ಸ್ಮರಣ ಸಂಚಿಕೆ ಬಿಡುಗಡೆ

0

ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕಂದ್ರಪ್ಪಾಡಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಾಲಾ ಶತಮಾನೋತ್ಸವದ ಶತಯಾನ ಸ್ಮರಣ ಸಂಚಿಕೆ ಬಿಡುಗಡೆಯು ನ.15ರಂದು ಶಾಲಾ ವಠಾರದಲ್ಲಿ ನಡೆಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ದ.ಕ.ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮಂಗಳೂರು ಎಂಆರ್ ಪಿಎಲ್‌ನ ಹರೀಶ್ ರಾವ್, ಲಯನ್‌ಸ್‌ ಪ್ರಾಂತೀಯ ಅಧ್ಯಕ್ಷ ಲ ರಂಗಯ್ಯ ಶೆಟ್ಟಿಗಾರ್, ಎಸ್ ಬಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ದಮ್ಮೂರು ಇದರ ಸಿಇಒ ಡಾ ಭವ್ಯ ಶೇಖರ್ ದಮ್ಮೂರು, ಗುತ್ತಿಗಾರು ಹಾಗೂ ಹರಿಹರ ಪಲ್ಲತ್ತಡ್ಕ ಇಲ್ಲಿಯ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬತ್ತಾಜೆ, ಉಪಸ್ಥಿತರಿದ್ದರು.

ದೇವಚಳ್ಳ ಗ್ರಾಾ.ಪಂ. ಸದಸ್ಯ ಭವಾನಿಶಂಕರ ಮುಂಡೋಡಿ, ಸುಲೋಚನಾ ದೇವ, ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ, ಸ್ಮರಣ ಸಂಚಿಕೆ ಸಂಪಾದಕ ಎ.ಕೆ.ಹಿಮಕರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವೀಣಾಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶತಯಾನ ಸ್ಮರಣ ಸಂಚಿಕೆ ಸಂಪಾದಕ ಎ.ಕೆ.ಹಿಮಕರರವರನ್ನು, ದಾನಿಗಳಾದ ಡಾ. ಭವ್ಯ ಶೇಖರ್ ದಮ್ಮೂರು, ಲ. ರಂಗಯ್ಯ ಶೆಟ್ಟಿಗಾರ್, ಎಂ.ಆರ್‌ಪಿ.ಎಲ್ ನ ಹರೀಶ್ ರಾವ್‌ರವರನ್ನು ಶತಮಾ ನೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಇಂಜಿನಿಯರ್ ಜನಾರ್ಧನ ಕುತ್ಯಾಳ, ಕಾಂಟ್ರಾಕ್ಟರ್ ಉದಯಕುಮಾರ್ ಮುಂಡೋಡಿಯವರನ್ನು ಅಭಿನಂದಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿ ಕೆ.ಎಸ್. ಸ್ವಾಗತಿಸಿದರು. ಶಿಕ್ಷಕ ಅಜಯ್ ವಂದಿಸಿದರು. ಪ್ರೀತಮ್ ಮುಂಡೋಡಿ ಮತ್ತು ವಿಜೇಶ್ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಆಶಾರಾಣಿ ಸಹಕರಿಸಿದರು.