ಕುಕ್ಕುಜಡ್ಕ : ವಿಷ್ಣುನಗರ ವಿಷ್ಣುಮೂರ್ತಿ, ರಕ್ತೇಶ್ವರಿ ದೈವಸ್ಥಾನದ 72 ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮೂಹೂರ್ತ

ಕುಕು ಜಡ್ಕ ವಿಷ್ಣು ನಗರದ ಶ್ರೀ ವಿಷ್ಣುಮೂರ್ತಿ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಜ.1 ರಿಂದ 3 ರ ತನಕ ನಡೆಯಲಿರುವ ಶ್ರೀ ದೈವಗಳ 72ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮಹಾಗೂಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮಹೂರ್ತ ನ.16ರಂದು ನೆರವೇರಿತು.

ಸಂಕ್ರಮಣದ ಪರ್ವ ಕಾಲದಲ್ಲಿ ಬೆಳಗ್ಗೆ ಶ್ರೀ ಮಹಾ ವಿಷ್ಣು ಭಜನಾ ಸಂಘ ದವರಿಂದ ಭಜನಾ ಕಾರ್ಯಕ್ರಮ, ಕುಣಿತ ಭಜನೆಯು ನಡೆಯಿತು. ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಅಲೆಟ್ಟಿ ಯವರ ನೇತೃತ್ವದಲ್ಲಿ ಸಂಕ್ರಮಣ ಪೂಜೆಯಾಗಿ ಜನವರಿ 2 ರಂದು ನಡೆಯಲಿರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತಕೋಲಕ್ಕೆ ಕೊಳ್ಳಿ ಮುಹೂರ್ತವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪಕರಾದ ಎಂ.ಜಿ ಸತ್ಯನಾರಾಯಣ, ಶ್ರೀಮತಿ ಎಂ.ಎಸ್ ಲತೇಶ್ವರಿ, ಎಂ. ಎಸ್ ಶ್ರೀಶಕುಮಾರ, ಎಂ. ಎಸ್ ಹರ್ಷಕುಮಾರ, ಎಂ.ಎಸ್ ಪ್ರಕಾಶ ಹಾಗೂ ಮಹಾವಿಷ್ಣು ಭಜನಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ತೀಯ ಸಮಾಜ ಬಾಂಧವರು ಉಪಸ್ಥಿತರಿದ್ದರು. ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.