ಸುಬ್ರಹ್ಮಣ್ಯ: ಜಾತ್ರಾರಂಭದ ಬಳಿಕವೂ ಮಣ್ಣು ಅಗೆತ

0

ಆಕ್ಷೇಪ ವ್ಯಕ್ತಪಡಿಸಿದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಿಂದ ಪತ್ರಿಕಾ ಗೋಷ್ಠಿ

ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾ ಷಷ್ಠಿ ಜಾತ್ರ್ರೋತ್ಸವ ಕೊಪ್ಪರಿಗೆ ಏರುವ ಮೂಲಕ ಚಾಲನೆಗೆ ದೊರೆತಿದೆ, ಆದರೆ ಸುಬ್ರಹ್ಮಣ್ಯ ದಲ್ಲಿ ದೇವಾಲಯ ವತಿಯಿಂದ ಮಣ್ಣಿನ ಅಗೆಯುತ್ತಿರುವುದಕ್ಕೆ ಆಕ್ಷೇಪಿಸಿ ಪತ್ರಿಕಾ ಗೋಷ್ಠಿ ನಡೆಸಿದ ಘಟನೆ ಇಂದು ಸುಬ್ರಹ್ಮಣ್ಯದಿಂದ ವರದಿಯಾಗಿದೆ.

ದೇವಾಲಯದಲ್ಲಿ ಕೊಪ್ಪರಿಗೆ ಏರಿದ ನಂತರ ಷಷ್ಠಿ ಮುಗಿಯುವ ತನಕ ದೇವಸ್ಥಾನ ಸುತ್ತಮುತ್ತ ವ್ಯಾಪ್ತಿಯಲ್ಲಿ ಮಣ್ಣು ಅಗೆಯುವುದು, ಬೇರೆ ಇನ್ನಿತರ ಕೆಲಸ ಕಾರ್ಯ ಮಾಡುವುದಿಲ್ಲ ಅದೊಂದು ನಂಬಿಕೆಯ ವಿಚಾರ ಆದರೆ ಇಂತಹ ಪವಿತ್ರವಾದ ದಿನ ಲಕ್ಷಾಂತರ ಜನರ ನಾಗರಾಧನೆ ಯ ಪವಿತ್ರ ಮಣ್ಣಿನ ಕ್ಷೇತ್ರವಾಗಿರುವ ಕುಕ್ಕೆಯ ರಥ ಬೀದಿಯಲ್ಲಿ ಜೆಸಿಬಿ ಮೂಲಕ ನಿರಂತರವಾಗಿ ಮಣ್ಣು ಅಗೆಯುವ ಮೂಲಕ ಭಕ್ತರ ನಂಬಿಕೆಗೆ ಘಾಸಿಗೊಳಿಸುವ ಕಾರ್ಯ ದೇವಸ್ಥಾನ ಆಡಳಿತ ಮಂಡಳಿ ಮಾಡುತ್ತಿದೆಯೆಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರು ಪತ್ರಿಕಾ ಗೋಷ್ಠಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಕಿಶೋರ್ ಕುಮಾರ್ ಶಿರಾಡಿ, ಪ್ರಸನ್ನ ದರ್ಬೆ, ವನಜಾ ಭಟ್, ಮಲೆ ಮೋನಪ್ಪ ಮಾನಾಡು ಸ್ಥಳೀಯರಾದ ದಿನೇಶ್ ಸಂಪ್ಯಾಡಿ, ಚಿದಾನಂದ, ರಾಜೇಶ್ ಎನ್. ಎಸ್‌, ಅಚ್ಯುತ ಗೌಡ, ಚಿದಾನಂದ ಕಂದಡ್ಕ, ಶ್ರೀ ಕುಮಾರ್, ಪ್ರಕಾಶ್ ಬಿಳಿನೆಲೆ, ಕಾರ್ತಿಕ್ಹೆಚ್ ಎಲ್ ವೆಂಕಟೇಶ್, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.