ಬೆಳ್ಳಾರೆ ಕೆಪಿಎಸ್ ನಲ್ಲಿ ತಾಲೂಕು ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆ

0

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಸುಳ್ಯಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ತಾಲೂಕು ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಪ್ರೌಢಶಾಲಾ ವಿಭಾಗದಲ್ಲಿ ನ.15 ರಂದು ನಡೆಯಿತು.


ವೈಯಕ್ತಿಕ ವಿಭಾಗದಲ್ಲಿ 11 ಶಾಲೆಗಳ ಸ್ಪರ್ಧಿಗಳು ಮತ್ತು ಗುಂಪು ವಿಭಾಗದಲ್ಲಿ 13 ತಂಡಗಳು ಭಾಗವಹಿಸಿದ್ದವು. ವೈಯಕ್ತಿಕ ವಿಭಾಗದಲ್ಲಿ ಇತಿನ್ ಎಂ. ಆರ್. ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಪ್ರಥಮ ಸ್ಥಾನ. ರುನಾಲ್ ಎಂ. ಕೆ. ಪಿ. ಎಸ್. ಬೆಳ್ಳಾರೆ ದ್ವಿತೀಯ ಸ್ಥಾನ. ಸನತ್ ಸರಕಾರಿ ಪ್ರೌಢಶಾಲೆ ಏನೆ ಕಲ್ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.


ಗುಂಪು ವಿಭಾಗದಲ್ಲಿ ಸ್ನೇಹ ಪ್ರೌಢಶಾಲೆ ಸುಳ್ಯ ಇಲ್ಲಿಯ ಅನ್ವಯ್ ಗಣೇಶ್ ಮತ್ತು ಗಗನ್ ಎ. ವಿ. ಪ್ರಥಮ ಸ್ಥಾನ ಶ್ರೀ ಶಾರದಾ ಪ್ರೌಢಶಾಲೆ ಸುಳ್ಯ ದ ಸ್ವರೂಪ್ ಕುಮಾರ್ ಮತ್ತು ದೀಕ್ಷಿತ್ ಏನ್. ವೈ ದ್ವಿತೀಯ ಸ್ಥಾನ ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲ ದ ಜಸ್ವಿತ್ ಕೆ. ಏನ್ ಮತ್ತು ಶ್ಯಾಮ್ ಇವರು ಪಡೆದುಕೊಂಡಿರುತ್ತಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಪುರಂದರ ನಾರಾಯಣ ಭಟ್ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್. ಡಿ. ಎಂ ಸಿ ಅಧ್ಯಕ್ಷರಾದ ಹರ್ಷ ಜೋಗಿಬೆಟ್ಟು ಇವರು ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಜನಾರ್ಧನ್. ಉಪ ಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ.ಕಾರ್ಯಕ್ರಮ ದ ನೋಡಲ್ ಅಧಿಕಾರಿಯಾದ ಶ್ರೀಮತಿ ಸಂಧ್ಯಾಕುಮಾರಿ ಬಿ. ಎಸ್. ನಿರ್ಣಾಯಕರಾಗಿ ಅಚ್ಚುತ ನಿವೃತ್ತ ಶಿಕ್ಷಕರು ಮರ್ಕಂಜ. ಗಾಯತ್ರಿ ಶಿಕ್ಷಕಿ ಎಡಮಂಗಲ. ಮಿಥುನಾಕ್ಷಿ ಶಿಕ್ಷಕಿ ಮುರುಳ್ಯ. ವಿಜ್ಞಾನ ಶಿಕ್ಷಕಿ ಶ್ರೀಮತಿ ಆಶಾ. ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಲತಾರವರು ಕಾರ್ಯಕ್ರಮ ನಿರೂಪಿಸಿದರು.