
ರೋಟರಿ ಕ್ಲಬ್ ಸುಳ್ಯ ಸಿಟಿ ಅಯೋಜಿತ ಸಂಸ್ಥೆ ರೋಟರಾಕ್ಟ್ ಕ್ಲಬ್ ಸುಳ್ಯ ಯುನೈಟೆಡ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ 13 ರಂದು ಸುಳ್ಯ ರೋಟರಿ ಸಮುದಾಯ ಭವನದಲ್ಲಿ ನಡೆಯಿತು.















ರೋಟರಾಕ್ಟ್ ರೇಮಂಡ್ ಹಾವರ್ಡ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತೃ ಸಂಸ್ಥೆ ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ರೋ. ಹೇಮಂತ್ ಕಾಮತ್ ಪದಗ್ರಹಣ ಕಾರ್ಯಕ್ರಮ ನೆರವೇರಿಸಿಕೊಟ್ಟರು. ನೂತನ ಅಧ್ಯಕ್ಷರಾಗಿ ರೋ. ಹೇಮಪ್ರಸಾದ್ ಎಂ. ಪಿ, ಕಾರ್ಯದರ್ಶಿಯಾಗಿ ರೋಟರಾಕ್ಟ್ ವರುಣ್ ಗೌಡ, ಕೋಶಾಧಿಕಾರಿಯಾಗಿ ರೋಟರಾಕ್ಟ್ ಬಿ. ಎಸ್ ಪ್ರಸನ್ನ, ಸಾರ್ಜೆಂಟ್ ಶ್ರೀನಿವಾಸ ಪಿ. ಜಿ ಹಾಗೂ ವಿವಿಧ ಸೇವಾ ವಿಭಾಗದ ನಿರ್ದೇಶಕರಿಗೆ ಪದ ಪ್ರದಾನ ನೆರವೇರಿಸಲಾಯಿತು. ವೇದಿಕೆಯಲ್ಲಿ ರೋಟರಿ ಝೋನ್ 5ರ ಅಸಿಸ್ಟೆಂಟ್ ಗವರ್ನರ್ ರೋ.ಪ್ರಮೋದ್ ಕುಮಾರ್ ಹಾಗೂ ರೋಟರಾಕ್ಟ್ ಚೇರ್ಮನ್ ರೋ.ಪ್ರೀತಮ್ ಡಿ. ಕೆ ಶುಭ ಹಾರೈಸಿದರು.
ರೋ. ಬಿ. ಎಸ್ ಪ್ರಸನ್ನ ಪ್ರಾರ್ಥಿಸಿದರು. ರೋ. ರೇಮಂಡ್ ಹಾವರ್ಡ್ ಸ್ವಾಗತಿಸಿದರು, ರೋ. ಗಿರೀಶ್ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು. ರೋ. ವರುಣ್ ಗೌಡ ವಂದಿಸಿದರು. ರೋಟರಿ ಕ್ಲಬ್ ಸುಳ್ಯ ಸಿಟಿ ಹಾಗೂ ರೋಟರಾಕ್ಟ್ ಕ್ಲಬ್ ಸುಳ್ಯ ಯುನೈಟೆಡ್ ನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










