
ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರು ಹಮ್ಮಿಕೊಂಡಿರುವ ಪಂಚ ಸಪ್ತತಿ 2025 ರ ಸ್ವಚ್ಛತಾ ಕಾರ್ಯಕ್ರಮ ತಾಲೂಕಿನ ವಿವಿಧಡೆ ಯುವಕ ಯುವತಿ ಮಂಡಲಗಳು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಗುತ್ತಿಗಾರಿನ ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ಇವರು ಸತತವಾಗಿ ೩೮ನೇ ದಿನ ದ ಸ್ವಚ್ಛತಾ ಕಾರ್ಯಕ್ರಮವನ್ನು ಗ್ರಾಮದ ರಸ್ತೆ ಬದಿ ಹಾಗೂ ಬಸು ತಂಗುದಾಣದ ಬಳಿ ಕಸ ಕಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.















ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ದಿನೇಶ್ ಹಾಲೆಮಜಲು, ಸತೀಶ್ ಮೂಕಮಲೆ ಹಾಗೂ ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷ ವಿನ್ಯಾಸ್ ಕೊಚ್ಚಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಯುಕ್ತ ಮಂಡಳಿಯ ನಿರ್ದೇಶಕ ದಿನೇಶ್ ಹಾಲೆಮಜಲು ತಂಡದ ಸದಸ್ಯರಿಗೆ ಬೆಳಗಿನ ಉಪಹಾರವನ್ನು ನೀಡಿ ಸತ್ಕರಿಸಿದರು.










