
ಆಲ್ ಇಂಡಿಯಾ ಶಿಟೋ-ರಿಯೂ ಕರಾಟೆ ಡು ಯೂನಿಯನ್ ಇದರಿಂದ ಮಾನ್ಯತೆ ಪಡೆದ ಇಂಪೇಕ್ಟ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ದ.ಕ. ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಇದರ ಆಶ್ರಯದಲ್ಲಿ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್-2025 ನವೆಂಬರ್ 22 ಮತ್ತು 23 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ.















ಎರಡು ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧೆಯಲ್ಲಿ ವಿವಿಧ ಕೆಟಗರಿಗಳಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆಂದು ಸ್ಪರ್ಧೆಯ ಸಂಯೋಜಕರಾದ ದಿನೇಶ್ ಕುಮಾರ್ ಎಂ.ಬಿ. ಮತ್ತು ಚಂದ್ರಶೇಖರ ಕೆ. ತಿಳಿಸಿದ್ಧಾರೆ.










