ಅಜ್ಜಾವರ ಅಡ್ಪಂಗಾಯದಲ್ಲಿ ಗಿಡ ನೆಡುವ ಮೂಲಕ ವೃಕ್ಷಮಾತೆ ಸಾಲು ತಿಮ್ಮಕ್ಕರವರ ಶ್ರದ್ಧಾಂಜಲಿ

0

ಪ್ರತಾಪ ಯುವಕ ಮಂಡಲ ಅಜ್ಜಾವರ ಹಾಗೂ ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ವತಿಯಿಂದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕರವರ ಸವಿ ನೆನಪಿಗಾಗಿ ಅಡ್ಪಂಗಾಯದಲ್ಲಿ ಗಿಡ ನೆಡುವ ಮೂಲಕ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಸುಳ್ಯ ಸಿ. ಎ ಬ್ಯಾಂಕ್ ಅಧ್ಯಕ್ಷರಾದ ಶ್ರೀ ವಿಕ್ರಂ ಅಡ್ಪ್ಪಂಗಾಯ ಅವರು ಗಿಡ ನೆಟ್ಟರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಕರ್ಲಪ್ಪಾಡಿ ಉತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಪಡ್ಡಂಬೈಲು, ಕಾರ್ಯದರ್ಶಿ ಯಶೋಧರ ನಾರಲು, ರೂಪಾನಂದ ಕರ್ಲಪ್ಪಾಡಿ, ಅರುಣ್ ಕುಮಾರ್ ಪಡ್ಡoಬೈಲು,ಪ್ರತಾಪ ಯುವಕ ಮಂಡಲ ಅಜ್ಜಾವರ ಅಧ್ಯಕ್ಷರಾದ ಗುರುರಾಜ್, ಕಾರ್ಯದರ್ಶಿ ನವೀನ್, ಕೋಶಾಧಿಕಾರಿ ಲೋಕೇಶ್ ರಾವ್, ಕ್ರೀಡಾಕಾರ್ಯದರ್ಶಿ ಗೌರೀಶ್,ಚರಣ್,ಗೌರವಸಲಹೆಗಾರದ ಸೂರ್ಯ ಕುಮಾರ್, ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಉಪಾಧ್ಯಕ್ಷರಾದ ಮಾಲತಿ ಸೂರ್ಯ, ಗೀತಾoಜಲಿಗುರುರಾಜ್, ರವೀಶ್ ಮಾವಿನಪಳ್ಳ, ವಿನಯ್ ಕರ್ಲಪ್ಪಾಡಿ, ಸಂಪತ್ ಅಜ್ಜಾವರ, ವಿನಯ್ ನಾರಲು, ಕು. ಧರಿತ್ರಿ, ಹಸೈನಾರ್ ಹಾಜಿ ಗೋರಡ್ಕ, ಸುರೇಶ್ ಗೋರಡ್ಕ, ಚೇತನ್ ಅಡ್ಡoತ್ತಡ್ಕ ,ಧವನ್ ರಾಜ್, ಶ್ರೀಶ ಉಪಸ್ಥಿತರಿದ್ದರು.