ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಖಂಡ ಭಜನೋತ್ಸವಕ್ಕೆ ನ. 16 ಮುಂಜಾನೆ ಚಾಲನೆ ನೀಡಲಾಯಿತು.
ಜಾತ್ರೋತ್ಸವದ ಆರಂಭದ ದಿನ ಶ್ರೀ ದೇವಳದ ರಥಬೀದಿ ಯ ಧರ್ಮಸಮ್ಮೇಳನ ಮಂಟಪದಲ್ಲಿ ಆರಂಭಗೊಂಡ ಭಜನೋತ್ಸವವನ್ನು ನಿವೃತ್ತ ಮುಖ್ಯ ಶಿಕ್ಷಕ ಕೆ.ಯಶವಂತ ರೈ ಉದ್ಘಾಟಿಸಿದರು.
















ಅಂದು ಬೆಳಗ್ಗೆ 6 ಗಂಟೆಯಿಂದ ನ17 ಬೆಳಗ್ಗೆ 6 ಗಂಟೆ ತನಕ ನಿರಂತರವಾಗಿ ಭಜನೆ ನಡೆಯಿತು. ಸುಮಾರು 23 ತಂಡಗಳು ಸೇವೆ ನೆರವೇರಿಸಿತು.ಭಜನೆ ಮತ್ತು ಕುಣಿತ ಭಜನೆ ಮೂಲಕ ತಂಡಗಳು ಸೇವೆ ಸಮರ್ಪಿಸಿದವು.ತಂಡದ ಪ್ರತಿ ಸದಸ್ಯರಿಗೂ ಶ್ರೀ ದೇವಳದಿಂದ ಶಾಲು ಮತ್ತು ಪ್ರಸಾದ ವಿತರಿಸಲಾಯಿತು.
ಈ ಸಂದರ್ಭ ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ, ಲೋಲಾಕ್ಷ ಕೈಕಂಬ, ಮಾಜಿ ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ, ವಿದ್ಯಾಸಾಗರ ಭಜನಾ ಸಂಗಮದ ಸಂಸ್ಥಾಪಕ ಗಣೇಶ್ ಪರ್ವತಮುಖಿ, ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ, ಕಲಾವಿದರಾದ ಕಾರ್ತಿಕ್ ಪ್ರಭಾಕರ ಪಡ್ರೆ, ಶ್ರೀ ದೇವಳದ ಯೋಗೀಶ್.ಎಂ.ವಿಟ್ಲ, ಬಾಲಕೃಷ್ಣ.ಆರ್, ಸಂದೇಶ್ ನಾಯಕ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.










